»   »  ರಾಜಕುಮಾರ್ ಆಗಲು ಸುವರ್ಣಾವಕಾಶ

ರಾಜಕುಮಾರ್ ಆಗಲು ಸುವರ್ಣಾವಕಾಶ

Subscribe to Filmibeat Kannada
Do you want become Rajkumar?
ಕನ್ನಡ ಚಿತ್ರರಂಗದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟ ವಿಭಿನ್ನವಾಗಿ ಭಾಗವಹಿಸುವ ಸಿದ್ಧತೆ ನಡೆಸುತ್ತಿದೆ. ಎಪ್ಪತ್ತೈದು ವರ್ಷ, ಎಪ್ಪತ್ತೈದು ರಾಜಕುಮಾರ್ ಎನ್ನುವುದು ಒಕ್ಕೂಟದ ಪರಿಕಲ್ಪನೆ.

ಜಂಬೂಸವಾರಿ ಮಾದರಿಯಲ್ಲಿ ನಡೆಯುವ ಅಮೃತ ಮಹೋತ್ಸವದ ಮೆರವಣಿಗೆಯಲ್ಲಿ ಒಕ್ಕೂಟದ ವತಿಯಿಂದ ಎಪ್ಪತ್ತೈದು ರಾಜಕುಮಾರರು ಭಾಗವಹಿಸಲಿದ್ದಾರೆ. ವರನಟ ರಾಜ್‌ಕುಮಾರ್ ಅವರನ್ನು ನೆನಪಿಸುವ ಇವರು, ರಾಜ್ ನಟನೆಯ ಎಪ್ಪತ್ತೈದು ಸಿನಿಮಾಗಳ ವೇಷಗಳನ್ನು ಧರಿಸಿರುತ್ತಾರೆ! ಅದು, ರಾಜ ಸಂಭ್ರಮ!

ಕನ್ನಡ ಸಿನಿಮಾ ಹಾಗೂ ಕನ್ನಡ ನುಡಿಯ ಪ್ರೇರಕ ಶಕ್ತಿಯಾಗಿದ್ದ ರಾಜ್ ಅವರನ್ನು ಅಮೃತ ಮಹೋತ್ಸವದ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಸ್ಮರಿಸಿಕೊಳ್ಳುವುದು ಒಕ್ಕೂಟದ ಉದ್ದೇಶ. ಹಾಂ, ಈ ರಾಜ ಹಬ್ಬದಲ್ಲಿ ನೀವೂ ಭಾಗವಹಿಸಬಹುದು. ಷರತ್ತು ಇಷ್ಟೇ, ಆಕರ್ಷಕ ಮೈಕಟ್ಟು ನಿಮ್ಮದಾಗಿರಬೇಕು.

ರಾಜಕುಮಾರರ ಆಯ್ಕೆಯ ಪ್ರಕ್ರಿಯೆ ಇದೇ ಭಾನುವಾರ (ಫೆ.22) ನಡೆಯಲಿದೆ. ಬೆಳಗ್ಗೆ 11ರಿಂದ ಮುಖಾಮುಖಿ. ಆಸಕ್ತರು ಸಂಪರ್ಕಿಸಬಹುದಾದ ವಿಳಾಸ: ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟ, 1/1, 2ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 560 009. ಫೋನ್: 94488 08363.

(ದಟ್ಸ್ ಕನ್ನಡ ಚಿತ್ರವಾರ್ತೆ)

ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!
ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada