»   » ಪೈರಸಿ ಹಾವಳಿ ತಡೆಗೆ ನಟ ಶ್ರೀನಾಥ್ ಆಗ್ರಹ

ಪೈರಸಿ ಹಾವಳಿ ತಡೆಗೆ ನಟ ಶ್ರೀನಾಥ್ ಆಗ್ರಹ

Posted By:
Subscribe to Filmibeat Kannada

ಪೈರಸಿ ಹಾವಳಿಯಿಂದ ಕನ್ನಡ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಇಳಿಮುಖವಾಗುತ್ತಿದ್ದು, ಚಿತ್ರಮಂದಿರಗಳು ಮುಚ್ಚುವ ಭೀತಿಯಲ್ಲಿವೆ ಎಂದು ವಿಧಾನ ಪರಿಷತ್ ಸದಸ್ಯ ನಟ ಶ್ರೀನಾಥ್ ಆತಂಕ ವ್ಯಕ್ತಪಡಿಸಿದರು. ಬಜೆಟ್ ಅಧಿವೇಷನ ಚರ್ಚಾ ಸಮಯದಲ್ಲಿ ಮೇಲ್ಮನೆಯಲ್ಲಿ ಮಾತನಾಡಿದ ಶ್ರೀನಾಥ್, ರಾಜ್ಯದಲ್ಲಿ ಕನ್ನಡ ಚಿತ್ರಮಂದಿರಗಳು ಉಳಿಯಬೇಕಾದರೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರಮಂದಿರ ನಿರ್ಮಾಣ ಮಾಡುವ ಅಗತ್ಯವಿದೆ ಎಂದರು.

ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಜಮೀನು ಗುರುತಿಸಿ ಕನಿಷ್ಠ 400 ಆಸನವುಳ್ಳ ಚಿತ್ರಮಂದಿರಗಳನ್ನು ಸರ್ಕಾರವೇ ನಿರ್ಮಿಸುವ ಅಗತ್ಯವಿದೆ. ಕನ್ನಡ ಚಲನಚಿತ್ರಗಳು ಪ್ರದರ್ಶನವಾದರೆ ತೆರಿಗೆ ಹಣ ಸರ್ಕಾರಕ್ಕೆ ಬರುತ್ತದೆ. ಕನ್ನಡ ಚಿತ್ರಗಳಿಗೂ ಆದ್ಯತೆ ಸಿಗುತ್ತದೆ. ಚಿತ್ರಮಂದಿರಗಳಿಗೂ ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸಿದರು.

ಎಷ್ಟೋ ಪ್ರಶಸ್ತಿ ವಿಜೇತ ಸದಭಿರುಚಿ ಚಿತ್ರಗಳು, ಹೆಚ್ಚಿನ ಪ್ರದರ್ಶನ ಭಾಗ್ಯವನ್ನು ಕಾಣುವುದೇ ಇಲ್ಲ. ಮಿನಿ ಚಿತ್ರಮಂದಿರಗಳು ಇದಕ್ಕೆ ಪರಿಹಾರವಾಗಬಲ್ಲದು. ಚಿತ್ರಮಂದಿರಗಳ ನಿರ್ಮಾಣ ಸಂಬಂಧ ಚಲನಚಿತ್ರ ಅಕಾಡೆಮಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಶ್ರೀನಾಥ್ ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada