For Quick Alerts
  ALLOW NOTIFICATIONS  
  For Daily Alerts

  ಫಿಲಂ ಫೀಲ್ಡಿಗೆ ಇಳಿದ ಪುರುಚ್ಚಿ ತಲೈವಿ ಜಯಲಲಿತಾ

  By Rajendra
  |

  ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಹಾಗೂ ಮಾಜಿ ತಾರೆ ಪುರುಚ್ಚಿ ತಲೈವಿ (ಕ್ರಾಂತಿ ನಾಯಕಿ) ಜೆ ಜಯಲಲಿತಾ ಅವರು ಮತ್ತೆ ಸಿನಿಮಾ ಫೀಲ್ಡಿಗೆ ಇಳಿಯಲಿದ್ದಾರೆ. ಆದರೆ ಈ ಬಾರಿ ಅವರು ಬಣ್ಣಹಚ್ಚಲು ಬರುತ್ತಿಲ್ಲ. ಬದಲಾಗಿ ಚಿತ್ರ ವಿತರಣೆ ಬಿಜಿನೆಸ್‍‌ನಲ್ಲಿ ತಮ್ಮ ಪಾದ ಊರಲಿದ್ದಾರೆ.

  ಸನ್ ಟಿವಿ ನೆಟ್‌ವರ್ಕ್‌ನ ಮಾರನ್ ಅವರಂತೆ ಜಯಲಲಿತಾ ಕೂಡ ಜಯ ನೆಟ್‌ವರ್ಕ್ ಒಡತಿ. ಸನ್ ಟಿವಿ ನೆಟ್‌ವರ್ಕ್ ಈಗಾಗಲೆ ಡಿಸ್ಟ್ರಿಬ್ಯೂಷನ್ ಬಿಜಿನೆಸ್ ಮಾಡುತ್ತಿದೆ. ಈಗ ಜಯಲಲಿತಾ ಕೂಡ ಅದೇ ರೀತಿಯ ಬಿಜಿನೆಸ್ ಮಾಡಲಿದ್ದಾರೆ ಎನ್ನುತ್ತವೆ ತಮಿಳುನಾಡು ಮೂಲಗಳು.

  ಕೋಲಿವುಡ್‌ನ ಸೂಪರ್ ಸ್ಟಾರ್ ಚಿತ್ರಗಳ ವಿತರಣೆ ಹಕ್ಕುಗಳನ್ನು ಈಗಾಗಲೆ ಜಯಲಲಿತಾ ಸ್ವಾಮ್ಯದ ಜಯ ನೆಟ್‌ವರ್ಕ್ ಪಾಲಾಗಿವೆಯಂತೆ. ಕಮಲ ಹಾಸನ್ ಅವರ ವಿಶ್ವರೂಪಂ ಹಾಗೂ ರಜನಿಕಾಂತ್ ಅವರ ಕೊಚ್ಚಡಯಾನ್ ಚಿತ್ರಗಳ ವಿತರಣೆ ಹಕ್ಕುಗಳು ಜಯ ನೆಟ್‌ವರ್ಕ್ ತೆಕ್ಕೆಗೆ ಬಿದ್ದಿವೆ ಎನ್ನಲಾಗಿದೆ. (ಏಜೆನ್ಸೀಸ್)

  English summary
  Chief Minister of Tamil Nadu and former actress J Jayalalitha is all set to enter films again! Surprised? Well, she is reportedly coming back to cinema through distribution business.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X