»   »  ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ

ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ

Subscribe to Filmibeat Kannada
Jayamala not contesting LS polls
ಎರಡು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ನೇರ ಪ್ರತಿಕ್ರಿಯೆ ನೀಡಿದ್ದಾರೆ. ನಟ ಡಾ.ವಿಷ್ಣುವರ್ಧನ್ ಇತ್ತೀಚೆಗೆ ಮಾತನಾಡುತ್ತಾ, ಟೈಗರ್ ಪ್ರಭಾಕರ್ ಅವರನ್ನು ಅಮೃತ ಮಹೋತ್ಸವದ ಮೊದಲ ದಿನ(ಮಾರ್ಚ್ 1) ಸ್ಮರಿಸಿಕೊಳ್ಳದೆ ಇದ್ದ್ದದ್ದು ದೊಡ್ಡ ದುರಂತ ಎಂದು ದೂರಿದ್ದರು.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜಯಮಾಲಾ , ವಿಷ್ಣುವರ್ಧನ್ ಅವರು ಕ್ಲಿಪ್ಪಿಂಗ್ ಗಳನ್ನು ಸರಿಯಾಗಿ ನೋಡಿಲ್ಲ. ಅಮೃತ ಮಹೋತ್ಸವದ ಮೊದಲ ದಿನ ಪ್ರದರ್ಶಿಸಿದ ಕ್ಲಿಪ್ಪಿಂಗ್ ಗಳಲ್ಲಿ ನಮ್ಮನ್ನು ಅಗಲಿದ ಕನ್ನಡದ ಎಲ್ಲ ಮಾಹಾನ್ ಕಲಾವಿದರನ್ನು ಸ್ಮರಿಸಿಕೊಳ್ಳಲಾಯಿತು. ಅದರಲ್ಲಿ ಟೈಗರ್ ಪ್ರಭಾಕರ್ ಸಹ ಇದ್ದರು. ಸ್ವತಃ ನಾನೇ ನೋಡಿದ್ದೇನೆ ಎಂದು ಉತ್ತರಿಸಿದ್ದಾರೆ.

ಎರಡನೆಯ ಪ್ರಮುಖ ವಿಷಯವೆಂದರೆ, ಜಯಮಾಲಾ ರಾಜಕೀಯ ಪ್ರವೇಶ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಂದಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ, ಕೆಎಫ್ ಸಿಸಿ ಅಧ್ಯಕ್ಷೆಯಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಂಬಿ ಮತ್ತು ಜಯಮಾಲಾ ಚುನಾವಣೆಗೆ ಸ್ಪರ್ಧೆ?
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada