»   »  ಚಾಪ್ಲಿನ್ ಪ್ರತಿಮೆಗೆ ಅಡ್ಡಿ; ಕಲಾವಿದರ ಪ್ರತಿಭಟನೆ

ಚಾಪ್ಲಿನ್ ಪ್ರತಿಮೆಗೆ ಅಡ್ಡಿ; ಕಲಾವಿದರ ಪ್ರತಿಭಟನೆ

Posted By:
Subscribe to Filmibeat Kannada
Producer Hemanth Hegde
ಚಾರ್ಲಿ ಚಾಪ್ಲಿನ್‌ನ ವಿಗ್ರಹ ನಿರ್ಮಾಣ ಮಾಡಹೊರಟ ಚಿತ್ರತಂಡದವರನ್ನು ಮತ್ತು ಸ್ವತಃ ಚಾಪ್ಲಿನ್‌ನಂತಹ ಮಹಾನ್ ಕಲಾವಿದನನ್ನು ಮತೀಯವಾದಿಗಳು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದರು. ಈ ಘಟನೆಯನ್ನು ಕರ್ನಾಟಕ ಸಾಹಿತಿ, ಕಲಾವಿದರ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಕಲಾವಿದನಿಗೆ ಯಾವುದೇ ಜಾತಿ, ಮತ, ಭಾಷೆ, ದೇಶದ ಎಲ್ಲೆಗಳಿಲ್ಲ. ಈ ಘಟನೆಯನ್ನು ಖಂಡಿಸಿ, ಪ್ರತಿಭಟಿಸುತ್ತಿರುವುದಾಗಿ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್ 20, ಶುಕ್ರವಾರ, ಸಂಜೆ 4.30ಗಂಟೆಯಿಂದ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗಾಂಧೀಜಿಯವರ ಪ್ರತಿಮೆಯ ಎದುರು ಪ್ರತಿಭಟನಾ ಸಭೆ ನಡೆಯಲಿದೆ. ನಾಡಿನ ಪ್ರತಿಷ್ಠಿತ ಸಾಹಿತಿಗಳು, ಕಲಾವಿದರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಪ್ರತಿನಿಧಿಗಳು ರಾಜ್ಯಪಾಲರನ್ನು ಭೇಟಿಯಾಗಿ ಮನವಿಯೊಂದನ್ನು ನೀಡಲಿದ್ದಾರೆ.

ಚಾರ್ಲಿ ಚಾಪ್ಲಿನ್ ಪ್ರತಿಮೆಯನ್ನು ಒತ್ತಿನೆಣೆ ಕಡಲ ತೀರದಲ್ಲಿ ನಿರ್ಮಿಸಲು 'ಹೌಸ್ ಫುಲ್' ಚಿತ್ರ ನಿರ್ಮಾಪಕರಿಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ ಮತೀಯವಾದಿಗಳ ಬೆದರಿಕೆಯ ಹಿನ್ನೆಲೆಯಲ್ಲಿ ಚಾಪ್ಲಿನ್ ಪ್ರತಿಮೆಯನ್ನು(67 ಅಡಿ ಎತ್ತರ) ಭಟ್ಕಳ ಅಥವಾ ಕಾರವಾರ ತೀರದಲ್ಲಿ ನಿರ್ಮಿಸುವುದಾಗಿ ನಿರ್ಮಾಪಕ ಹೇಮಂತ್ ಹೆಗಡೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!
ಒತ್ತಿನೆಣಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ
ಗೋಲ್ಡನ್ ಸ್ಟಾರ್ ಗಣೇಶ್; ಚಾಪ್ಲಿನ್ ಆದಾಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada