»   » ಅರ್ಥವತ್ತಾಗಿ ಲವ್ಲಿಸ್ಟಾರ್ ಪ್ರೇಮ್ ಹುಟ್ಟುಹಬ್ಬ

ಅರ್ಥವತ್ತಾಗಿ ಲವ್ಲಿಸ್ಟಾರ್ ಪ್ರೇಮ್ ಹುಟ್ಟುಹಬ್ಬ

Posted By:
Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ತಮ್ಮ ಹುಟ್ಟುಹಬ್ಬವನ್ನು ಇದೇ ಮೊದಲ ಬಾರಿಗೆ ಅಭಿಮಾನಿಗಳ ನಡುವೆ ಏ.18ರಂದು ಆಚರಿಸಿಕೊಂಡಿದ್ದಾರೆ . ಹುಟ್ಟುಹಬ್ಬಗಳು ಬರುತ್ತವೆ ಹೋಗುತ್ತವೆ. ಆದರೆ ನೆನಪಿನಲ್ಲಿ ಉಳಿಯುವ ಹುಟ್ಟುಹಬ್ಬಗಳು ಕೆಲವೇ ಕೆಲವು ಮಾತ್ರ. ಪ್ರೇಮ್ ತಮ್ಮ ಹುಟ್ಟುಹಬ್ಬವನ್ನು ನೆನಪಿರುವ ರೀತಿಯಲ್ಲಿ ಆಚರಿಸಿಕೊಂಡಿರುವುದು ವಿಶೇಷ.

ಮರೆಯಾದ ಮಹಾನ್ ಚೇತನ್ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಪ್ರೇಮ್ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅನಾಥ ಮಕ್ಕಳೊಂದಿಗೆ ಪಿವಿಆರ್ ಚಿತ್ರಮಂದಿರದಲ್ಲಿ 'ಆಪ್ತರಕ್ಷಕ' ಚಿತ್ರವನ್ನು ವೀಕ್ಷಿಸಿ ಸಂಭ್ರಮಪಟ್ಟಿದ್ದಾರೆ. ಪ್ರೇಮ್ ಮುವ್ವತ್ತೈದು ವಸಂತಗಳಿಗೆ ಅಡಿಯಿಟ್ಟ ನೆನಪಿಗಾಗಿ 35 ಟಿಕೆಟ್ ಗಳನ್ನು ಪಡೆದು ಪಿವಿಆರ್ ನಲ್ಲಿ ಅನಾಥ ಮಕ್ಕಳೊಂದಿಗೆ ಆಪ್ತರಕ್ಷಕ ನೋಡಿದರು.

ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇದಕ್ಕೂ ಮೊದಲು ತಮ್ಮ ಕುಟುಂಬದವರೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಪ್ರೇಮ್ ಆಚರಿಸಿಕೊಂಡರು. ಹಾಲಪ್ಪ ಪ್ರತಿಷ್ಠಾನದ ಮುರಳಿಧರ ಹಾಲಪ್ಪ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹುಟ್ಟುಹಬ್ಬವನ್ನು ಹೀಗೂ ಸರಳ, ಸುಂದರವಾಗಿ ಆಚರಿಸಿಕೊಳ್ಳಬಹುದು ಎಂಬುದನ್ನು ನೆನಪಿರಲಿ ಪ್ರೇಮ್ ತೋರಿಸಿಕೊಟ್ಟಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada