»   » ರಸ್ತೆ ಅಪಘಾತದಲ್ಲಿ ಓಂ ಪ್ರಕಾಶ್ ಗೆ ಗಾಯ

ರಸ್ತೆ ಅಪಘಾತದಲ್ಲಿ ಓಂ ಪ್ರಕಾಶ್ ಗೆ ಗಾಯ

Posted By:
Subscribe to Filmibeat Kannada

ರಸ್ತೆ ಅಪಘಾತದಲ್ಲಿ ನಟ, ನಿರ್ದೇಶಕ ಓಂ ಪ್ರಕಾಶ್ ರಾವ್ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಓಂ ಪ್ರಕಾಶ್ ಪ್ರಕಾಣಿಸುತ್ತಿದ್ದ ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ್ದು ಬಸ್ ಪ್ರಯಾಣಿಕನೊಬ್ಬ ಸೇರಿದಂತೆ ಕಾರಿನ ಚಾಲಕ ಗಾಯಗೊಂಡಿದ್ದಾರೆ.

ಓಂ ಪ್ರಕಾಶ್ ರಾವ್ ಹಾಗೂ ಗಾಯಗೊಂಡ ಇತರೆ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಿದ್ದಾಪುರ ತಾಲೂಕಿನ ಕಾನಸೂರು ಸಮೀಪದ ಹಳದೋಟ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಓಂ ಪ್ರಕಾಶ್ ರಾವ್ ಅವರು ಬೆಂಗಳೂರಿನಿಂದ ಶಿರಸಿಗೆ ಪ್ರಯಾಣಿಸುತ್ತಿದ್ದರು.

ಕಾಸನೂರು ಸಮೀಪದ ತಿರುವಿನ ಬಳಿ ಬರುತ್ತಿದ್ದಂತೆ ಸಾಗರಕ್ಕೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸು ಹಾಗೂ ಓಂ ಪ್ರಕಾಶ್ ಕಾರಿನ ನಡುವೆ ಡಿಕ್ಕಿ ಸಂಭವಿಸಿತು. ಓಂ ಪ್ರಕಾಶ್ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರಿನ ಚಾಲಕ ಹರೀಶ್ ಹಾಗೂ ಬಸ್ಸಿನ ಪ್ರಯಾಣಿಕ ಪ್ರಭಾಕರ ಹೆಗಡೆ ಎಂಬುವವರು ಗಾಯಗೊಂಡವರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada