»   »  ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್

ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್

Posted By:
Subscribe to Filmibeat Kannada
Kiran Bedi film director Om Prakash Rao
ಓಂ ಪ್ರಕಾಶ್ ರಾವ್, ಮಾಸ್ ನಿರ್ದೇಶಕ ಎಂದೇ ಖ್ಯಾತರಾದವರು. ಓಂ ನಿರ್ದೇಶನದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಕಥೆಯ ಆಯ್ಕೆ, ಪ್ರೇಕ್ಷಕರನ್ನು ಸೆಳೆಯುವ ಜಾಣ್ಮೆ ಓಂ ಪ್ರಕಾಶ್ ಗೆ ಇದೆ ಎಂದರೆ ತಪ್ಪಾಗಲಾರದು.

ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ ನಿಂದ ರಾಮುರನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ಯುತ್ತಿರುವ ನಿರ್ದೇಶಕ. ಶಿವರಾಜ್ ಕುಮಾರ್ ಅಭಿನಯಿಸಿದ, ಶತದಿನೋತ್ಸವ ಆಚರಿಸಿಕೊಂಡ 'ಸಿಂಹದ ಮರಿ' ನಿರ್ದೇಶಿಸಿದ ಖ್ಯಾತಿಯೂ ಓಂ ಪ್ರಕಾಶ್ ಗಿದೆ. ಇದಾದ ಎಷ್ಟೋ ದಿನಗಳ ನಂತರ ಶಿವಣ್ಣನ ನಾಯಕತ್ವದಲ್ಲಿ 'ಎ.ಕೆ 47' ನಿರ್ದೇಶಿಸಿ ತಾವೊಬ್ಬ ಅದ್ಭುತ ತಂತ್ರಜ್ಞ ಎಂಬುದನ್ನು ಸಾಬೀತು ಪಡಿಸಿದರು.ನಿರ್ಮಾಪಕ ರಾಮು ಅವರಿಗೂ ಒಳ್ಳೆಯ ಗಳಿಕೆ ತಂದುಕೊಟ್ಟ ಚಿತ್ರ.

ನಾಲ್ಕು ವರ್ಷಗಳ ಹಿಂದೆ ದರ್ಶನ್ ಗೂ ಹೊಸ ಇಮೇಜ್ ತಂದುಕೊಟ್ಟದ್ದು ಇದೇ ರಾಮು, ಓಂ ಜೋಡಿ. "ಕಲಾಸಿ ಪಾಳ್ಯ" ಸೆಕೆಂಡ್ಸ್ ದಂಧೆ, ರೌಡಿಸಂ, ರಾಜಕೀಯ, ಭ್ರಷ್ಟ ಪೊಲೀಸ್ ಅಧಿಕಾರಿಗಳ ಕರ್ಮಕಾಂಡಸುತ್ತ ಹೆಣೆಯಲಾದ ಕತೆಯನ್ನು ಕಲಾಸಿಪಾಳ್ಯ ಒಳಗೊಂಡಿತ್ತು. ಬಾಕ್ಸಾಫೀಸ್ ನಲ್ಲಿ ಗೆದ್ದ ಸಿನಿಮಾ.

ನಾಲ್ಕರಲ್ಲಿ ನಾಲ್ಕು ಹಿಟ್ ಚಿತ್ರಗಳನ್ನು ಕೊಟ್ಟಿರುವ ರಾಮು, ಓಂ ಜೋಡಿ 'ಕಿರಣ್ ಬೇಡಿ' ಚಿತ್ರದ ಬಗ್ಗೆ ಇನ್ನಿಲ್ಲದ ನಂಬಿಕೆಯನ್ನು ಇಟ್ಟುಕೊಂಡಿದೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ನಿರ್ಮಾಪಕ ರಾಮು ಮತ್ತು ನಿರ್ದೇಶಕ ಓಂ ಪ್ರಕಾಶ್ ಇದ್ದಾರೆ. ಕಾದು ನೋಡೋಣ?

(ದಟ್ಸ್ ಕನ್ನಡ ಚಿತ್ರವಾರ್ತೆ)
ಯುಗಾದಿಗೆ ಬರುತ್ತಿದ್ದಾರೆ ಕನ್ನಡದ ಕಿರಣ್ ಬೇಡಿ
ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ
ಪ್ರೇಕ್ಷಕರ ಎದೆ ಝಲ್ಲೆನ್ನಿಸಲಿದ್ದಾರೆ ಮಾಲಾಶ್ರೀ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada