For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿದೆ ಸೂಪರ್ ಪೈರಸಿ ಸಿಡಿ ಜಾಲ

  By * ಬಿ.ಎಂ.ಲವಕುಮಾರ್, ಮೈಸೂರು
  |

  ಮೈಸೂರು, ಡಿ.19: ಮೈಸೂರು ನಗರದ ವಿವಿಧೆಡೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಪೈರಸಿ ಸಿಡಿಗಳನ್ನು ವಶಪಡಿಸಿಕೊಂಡಿದ್ದು, ಹನ್ನೆರಡು ಮಂದಿಯನ್ನು ಬಂಧಿಸಲಾಗಿದೆ. ನಕಲಿ ಸಿಡಿಗಳ ರಾಶಿಯಲ್ಲಿ ಇತ್ತೀಚಿನ ಯಶಸ್ವಿ ಚಿತ್ರಗಳಾದ ಜಾಕಿ, ಸೂಪರ್ ಕೂಡಾ ರಾರಾಜಿಸುತ್ತಾ ಬಿದ್ದಿದ್ದವು.

  ಮೈಸೂರು ನಗರದಲ್ಲಿರುವ ಸಂಗಂ, ಶಾಲಿಮಾರ್, ಪ್ರಭಾ, ಒಲಂಪಿಯಾ ಹಾಗೂ ಶಾಂತಲ ಥಿಯೇಟರ್ ಸುತ್ತಮುತ್ತ ಸೇರಿದಂತೆ ಕೆಲವು ಸಿಡಿ ಸೆಂಟರ್‌ಗಳಿಗೆ ಪೊಲೀಸರು ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಮಂದಿ ದಾಳಿ ನಡಸಿ ಪೈರೆಸಿ ಸಿಡಿಗಳನ್ನು ವಶಪಡಿಸಿಕೊಂಡರು.

  ಸೂಪರ್ ಸಿಡಿ ಬೇಕಾ?:ಇತ್ತೀಚೆಗೆ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ ಹಾಗೂ ಉಪೇಂದ್ರ ಅಭಿನಯದ ಸೂಪರ್ ಚಿತ್ರಗಳ ಪೈರೆಸಿ ಕುರಿತು ಮಾಹಿತಿ ದೊರೆತ ಹಿನ್ನಲೆಯಲ್ಲಿ ಮೈಸೂರಿಗೆ ಆಗಮಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳಾದ ಸಾ.ರಾ.ಗೋವಿಂದ್, ರಾಕ್‌ಲೈನ್ ವೆಂಕಟೇಶ್, ಬಣಕಾರ್, ಕರಿಸುಬ್ಬು, ಕೆ.ಮಂಜು, ಸಂದೇಶ್ ನಾಗರಾಜ್, ನಟ ದುನಿಯಾ ವಿಜಿ, ನಟಿ ತಾರಾ ಅವರುಗಳು ಡಿಸಿಪಿ ಬಸವರಾಜ್ ಮಾಲಗತ್ತಿ ಅವರೊಂದಿಗೆ ಚರ್ಚಿಸಿ ಬಳಿಕ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.

  ರಸ್ತೆ ಬದಿಗಳಲ್ಲಿ ಸಿಡಿ ಮಾರಾಟ ಮಾರಾಟ ಮಾಡುತ್ತಿದ್ದ ಅಂಗಡಿಗಳಲ್ಲದೆ, ಮಂಡಿಮೊಹಲ್ಲಾದ ವಾಣಿಜ್ಯ ಸಂಕೀರ್ಣದಲ್ಲಿದ್ದ ಎರಡು ಸಿಡಿ ಸೆಂಟರ್ ಮೇಲೆ ದಾಳಿ ನಡೆಸಿ ಎರಡು ಸಾವಿರಕ್ಕೂ ಹೆಚ್ಚು ಸಿಡಿಗಳು ಹಾಗೂ ಸಿನಿಮಾ ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಅನಿರೀಕ್ಷಿತ ದಾಳಿಯಿಂದ ಸುಮಾರು ಎರಡು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸಿಡಿಗಳು ದೊರೆತಿರುವುದರಿಂದ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪೈರೆಸಿ ದಂಧೆಯನ್ನು ತಡೆಯುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಯು ಡಿಸಿಪಿ ಬಸವರಾಜ ಮಾಲಗತ್ತಿಯವರಿಗೆ ಮನವಿ ಸಲ್ಲಿಸಿದೆ.

  English summary
  Pirated CD DVD racket busted in Mysore city. City has now become Piracy CD market. Latest movies like Jackie and Super are available in gray market. KFCC and Mysore city police jointly attacked the Movie theaters, Malls, CD centers held 12 persons

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X