»   » 'ಮಾಯದಂತ ಮಳೆ'ಯೊಂದಿಗೆ ಶ್ರುತಿ ಆಗಮನ

'ಮಾಯದಂತ ಮಳೆ'ಯೊಂದಿಗೆ ಶ್ರುತಿ ಆಗಮನ

Posted By:
Subscribe to Filmibeat Kannada

'ಮಾಯದಂತ ಮಳೆ'ಯೊಂದಿಗೆ ನಟಿ ಶ್ರುತಿ ಮತ್ತೆ ಬೆಳ್ಳಿಪರದೆ ಹಿಂತಿರುಗಿದ್ದಾರೆ. ಬೆಂಗಳೂರು ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಆಲಯದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು.ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ವೀರೇಶ್ ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ.

ಕವಿತಾ ಲಂಕೇಶ್ ನಿರ್ದೇಶಿಸಿದ್ದ 'ಅವ್ವ' ಚಿತ್ರದ ಬಳಿಕ ಮಾಯದಂತ ಮಳೆ ಚಿತ್ರದ ಮೂಲಕ ಶ್ರುತಿ ಮರಳಿದ್ದಾರೆ. ಅಳುಮುಂಜಿ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಗೋಳುಹೊಯ್ದು ಕೊಳ್ಳುತ್ತಿದ್ದ ಶ್ರುತಿ 'ಅವ್ವ' ಚಿತ್ರದಲ್ಲಿ ಪ್ರೇಕ್ಷಕರನ್ನು ನಕ್ಕು ನಲಿಸಿದ್ದರು. ನನ್ನ ವೃತ್ತಿ ಜೀವನಲ್ಲಿ ಕಾಮಿಡಿ ಪಾತ್ರಗಳಲ್ಲಿ ಅಭಿನಯಿಸಿದ್ದು ಕಮ್ಮಿ ಎಂಬ ಮಾತನ್ನು ಶ್ರುತಿ ಸಹ ಒಪ್ಪುತ್ತಾರೆ. 'ಮಾಯದಂತ ಮಳೆ' ಸಹ ಸತ್ವಭರಿತ ಪಾತ್ರಎನ್ನುತ್ತಾರೆ ಶ್ರುತಿ.

ನಿರ್ದೇಶನದ ಜೊತೆ ವೀರೇಶ್ ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು ಬೆಂಗಳೂರು, ಚಿಕ್ಕಮಗಳೂರು ಮತ್ತು ದತ್ತ ಪೀಠದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ವೀರೇಶ್ ತಿಳಿಸಿದ್ದಾರೆ. ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ದೊಡ್ಡಬಳ್ಳಾಪುರದ ಬದ್ರಿ.

ಚಿತ್ರದ ಮುಖ್ಯಭೂಮಿಕೆಯಲ್ಲಿ ನಾಗಕಿರಣ್, ರೂಪಿಕಾ ಇದ್ದಾರೆ. ದಂಪತಿಗಳ ಪಾತ್ರದಲ್ಲಿ ಶ್ರುತಿ ಮತ್ತು ಶರತ್ ಬಾಬು ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಮ್ಯೂಸಿಕ್ ಮೋಹನ್ ಅವರ ಸಂಗೀತ ಚಿತ್ರಕ್ಕಿದೆ. ಹಂಸಲೇಖ ಮತ್ತು ವಿ ಮನೋಹರ್ ಅವರ ಬಳಿ ಕೆಲಸ ಮಾಡಿದ ಅನುಭವ ಮ್ಯೂಸಿಕ್ ಮೋಹನ್ ಅವರಿಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada