»   » ಕ್ಷಣಹೊತ್ತು ಉಪೇಂದ್ರ 'ಸೂಪರ್' ಆಣಿಮುತ್ತುಗಳು!

ಕ್ಷಣಹೊತ್ತು ಉಪೇಂದ್ರ 'ಸೂಪರ್' ಆಣಿಮುತ್ತುಗಳು!

Posted By: *ಮಂಡಕ್ಕಿ ರಾಜ
Subscribe to Filmibeat Kannada

ಚಪ್ಪರದ ಬಣ್ಣದ ಕೂದಲು. ಚಿಂಪರು ಚಿಂಪರು. ಬಂದರು ಉಪ್ಪಿ. ಮಾತಾಡಿ ಅಂದರು ಎದುರಲ್ಲಿ ಕೂತರು. ಉಪ್ಪಿ ಕಣ್ಣಷ್ಟೇ ಗಿರಗಿರ. ಆಡಲೇನಿದೆ ಮಾತು- ಕೇಳಿ ಪ್ರಶ್ನೆ ಅಂದರು. ಕೇಳಿದ ಯಾವುದಕ್ಕೂ ಉತ್ತರ ಮಾತ್ರ ಇಲ್ಲವೇ ಇಲ್ಲ.

ಉಪ್ಪಿ-ರಾಕ್‌ಲೈನ್ ಹೊಸಚಿತ್ರ ಸೆಟ್ಟೇರಿದ ಸಂದರ್ಭ. ಸಮಯ ಫೆಬ್ರವರಿ 18 ಗುರುವಾರ ಊಟದ ಹೊತ್ತು. ಸುದ್ದಿಗೋಷ್ಠಿ ನಡೆದ ಸ್ಥಳ: ಕೆಎಸ್‌ಸಿಎ, ಬೆಂಗಳೂರು. ಉಪೇಂದ್ರ ಅವರಿಗಿಂತಲೂ ಹೆಚ್ಚು ಪತ್ರಕರ್ತರೇ ಮಾತನಾಡಿದರು. ಆ ಮಾತುಕತೆ ಹೀಗಿದೆ:

ಚಿತ್ರದ ಹೆಸರು?
ಅವರವರ ಭಾವಕ್ಕೆ.

ಸಬ್ಜೆಕ್ಟು?
ಸಿನಿಮಾ ನೋಡಿ.

ನಾಯಕ ಏನಾಗಿರ್ತಾನೆ?
ಅದು ಹೇಳಿದರೆ ಕಥೆ ಗೊತ್ತಾಗುತ್ತೆ. ಡಾಕ್ಟರ್, ಜರ್ನಲಿಸ್ಟ್, ಸೈಂಟಿಸ್ಟ್: ಇದಾವುದೂ ಅಲ್ಲ.

ಬಜೆಟ್ಟು?
ಸಿನಿಮಾಗೆ ತಕ್ಕಂತೆ ಇರುತ್ತೆ.

ನೀವು ಏನೂ ಹೇಳುತ್ತಿಲ್ಲವಲ್ಲ?
ಹೇಳೋಕೆ ಏನೂ ಇಲ್ಲ.

ಇಷ್ಟು ದಿನ ನಿರ್ದೇಶಿಸಲಿಲ್ಲವೇಕೆ?
ಭಯವಿತ್ತು. ನಿರೀಕ್ಷೆಯ ಭಾರವಿತ್ತು. ನನಗೇ ನನ್ನ ಮೇಲೆ ವಿಶ್ವಾಸವಿರಲಿಲ್ಲ. ಈಗಲೂ ಭಯ ಇದೆ. ಆದರೆ ಕಥೆ ಭಿನ್ನವಾಗಿ ಹೇಳಬಲ್ಲೆ ಅನ್ನಿಸಿದೆ. ಸಿನಿಮಾ ಆಗುತ್ತಿದೆ.

ಸಂಭಾಷಣೆ ವಿಕ್ಷಿಪ್ತವೋ, ವಿಭಿನ್ನವೋ?
ಅದೂ ಕಥೆಗೆ ತಕ್ಕಂತೆ ಇರುತ್ತದೆ. ಏನಾಗುತ್ತದೋ ಗೊತ್ತಿಲ್ಲ.

ಎಲ್ಲೆಲ್ಲಿ ಶೂಟಿಂಗು?
ಬೆಂಗಳೂರೇ ಹೆಚ್ಚು. ಹೈದ್ರಾಬಾದು, ಮುಂಬೈ, ಯುರೋಪ್‌ನ ಕೆಲವು ಕಡೆಯೂ ನಡೆಯುತ್ತೆ.

ಎಷ್ಟು ದಿನ?
90 ದಿನ ಅಂತ ಪ್ಲಾನು. ನೂರು ದಿನ ಆದರೂ ಆಗಬಹುದು.

ಎಲ್ಲವೂ ಗುಟ್ಟೇಕೆ?
ಜನ ಸಿನಿಮಾ ನೋಡಿ ಮಾತಾಡಲಿ ಅಂತ. ಹೆಸರು ಬರೀ ಸಿಂಬಲ್. ಅದನ್ನು ನೋಡಿ ಒಬ್ಬರಿಗೆ ಸೂಪರ್ ಅನ್ನಿಸಿದರೆ, ಇನ್ನೊಬ್ಬರಿಗೆ ವಾವ್ ಅನ್ನಿಸುತ್ತೆ. ಮತ್ತೊಬ್ಬರಿಗೆ ಇನ್ನೇನೋ ಹೀಗೇ. ಅವರವರ ಭಾವಕ್ಕೆ. ಜನರೇ ಬೇರೆ ಬೇರೆ ತರಹ ಅಂದುಕೊಳ್ಳಬೇಕು, ಹಾಗಿರುತ್ತೆ ಸಿನಿಮಾ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X