»   » ಉಪೇಂದ್ರ, ನಯನತಾರಾ ಹದಿನೆಂಟರ ನಂಟು

ಉಪೇಂದ್ರ, ನಯನತಾರಾ ಹದಿನೆಂಟರ ನಂಟು

Posted By:
Subscribe to Filmibeat Kannada

ಇದು 'ಸೂಪರ್' ಜೋಡಿಯ ಹದಿನೆಂಟರ ನಂಟಿನ ಕತೆ! ಉಪೇಂದ್ರ ಮತ್ತು ನಯನತಾರಾ ಅವರ ಜೀವನದಲ್ಲಿ ಮರೆಯಲಾಗದ ಸಂಖ್ಯೆ ಹದಿನೆಂಟು. ಏಕೆಂದರೆ ಇಬ್ಬರೂ ಹುಟ್ಟಿದ ದಿನಾಂಕ ಹದಿನೆಂಟು. ನಯನತಾರಾ ನವೆಂಬರ್ 18, 1984ರಲ್ಲಿ ಹುಟ್ಟಿದರೆ, ಸೆಪ್ಟೆಂಬರ್ 18, 1967ರಲ್ಲಿ ಉಪ್ಪಿ ಭೂಮಿಗೆ ಪದರ್ಪಣೆ ಮಾಡಿದರು.

ಇಂಟರೆಸ್ಟಿಂಗ್ ವಿಚಾರ ಎಂದರೆ ಮಲ್ಲು ಬೆಡಗಿ ನಯನತಾರಾ ಹುಟ್ಟಿದ್ದು ಬೆಂಗಳೂರಿನಲ್ಲಿ. ಆದರೆ ಅವರು ತಮ್ಮ 26ನೇ ಹುಟ್ಟುಹಬ್ಬವನ್ನು ಮಾತ್ರ ಹೈದರಾಬಾದಿನಲ್ಲಿ ಆಚರಿಸಿಕೊಂಡಿದ್ದಾರೆ. ಸದ್ಯಕ್ಕೆ ಆಕೆ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದು ಹೈದರಾಬಾದಿನಲ್ಲೇ ಇರುವ ಕಾರಣ ಅಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಸೂಪರ್' ಚಿತ್ರದ ಆಡಿಯೋ ನವೆಂಬರ್ 19ಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ನವೆಂಬರ್ 28ರಂದು ಅರಮನೆ ಮೈದಾನದಲ್ಲಿ ಸೂಪರ್ ಆಡಿಯೋ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada