»   » ಸಾಫ್ಟ್ ಸೆಕ್ಸ್ ಚಿತ್ರಗಳ ರಾಣಿ ಶಕೀಲಾ ಹುಟ್ಟುಹಬ್ಬ!

ಸಾಫ್ಟ್ ಸೆಕ್ಸ್ ಚಿತ್ರಗಳ ರಾಣಿ ಶಕೀಲಾ ಹುಟ್ಟುಹಬ್ಬ!

Posted By:
Subscribe to Filmibeat Kannada

ಶಕೀಲಾಗೆ ಶಕೀಲಾಳೆ ಸಾಕ್ಷಿ . ಸಿಲ್ಕ್‌ ಸ್ಮಿತಾ ಬಿಟ್ಟರೆ ಸೆಕ್ಸಿ ತಾರೆಯರ ಪಟ್ಟಿಯಲ್ಲಿ ಶಕೀಲಾಳಿಗೇ ಅಗ್ರಸ್ಥಾನ. ಆದರೆ, ಸಿಲ್ಕ್‌ ಕುಣಿತಕ್ಕೆ ಪ್ರಸಿದ್ಧಿ ; ಅಷ್ಟಿಷ್ಟು ನಟನೆಯೂ ಆಕೆಗೆ ಗೊತ್ತಿತ್ತು. ಶಕೀಲಾ ಶೈಲಿಯೇ ಬೇರೆ, ಚಿತ್ರಗಳೂ ಬೇರೆ. ಆಕೆಯ ಸಿನಿಮಾಗಳದು ಪದಗಳ ಹಂಗಿಲ್ಲ ದ ಸಾರ್ವತ್ರಿಕ ದೇಹಭಾಷೆ. ಕಥೆ ಇರುತ್ತದೆ, ಹೆಸರಿಗೆ. ನಾಯಕನೂ ಇರುತ್ತಾನೆ, ಅಗತ್ಯಕ್ಕೆ. ಆದರೆ, ಇಡೀ ಸಿನಿಮಾ ಸುತ್ತುವುದು ಶಕೀಲಾಳ ದೇಹದ ಸುತ್ತ. ಇದು 'ಸಾಫ್ಟ್‌ ಸೆಕ್ಸ್‌" ಸಿನಿಮಾಗಳ ರಾಣಿಯೆಂದೇ ಪ್ರಸಿದ್ಧಳಾದ ಶಕೀಲಾಳ ಕಥೆ. ಈಕೆ ಭಾರತದ ಸಿನಿಮಾಕ್ಕೆ ಲೈಂಗಿಕ ಸ್ಪರ್ಶ ನೀಡಿದ ಕೇರಳದ ಕೊಡುಗೆ!

ಹದಿನಾರು ಎಂಎಂ ಕ್ಯಾಮರಾ ಹಾಗೂ ಒಂದು ಬಂಗಲೆ ಇಷ್ಟಿದ್ದರೆ ಸಾಕು, ಶಕೀಲಾ ಸಿನಿಮಾ ಮುಗಿದಂತೆಯೇ. ಆ ಚಿತ್ರದಲ್ಲಿ ಆಕೆಯೇ ನಾಯಕ! ತೆರೆ ತುಂಬ ಅಂಗೋಪಾಂಗ ಆವರಿಸಿಕೊಳ್ಳುವ ಶಕೀಲಾ, ಪ್ರೇಕ್ಷಕರ ಪೂರ್ತಿಯಾಗಿ ಆವರಿಸಿಕೊಳ್ಳುತ್ತಾಳೆ. ಹಾಗೆ ನೋಡಿದರೆ ಆಕೆಗೆ ನಟನೆಯ ಗಂಧವೇನೂ ಇಲ್ಲ. ಇರುವುದೊಂದೇ, ದಢೂತಿ ದೇಹ. ಅದುವೇ ಆಕೆಯ ಬಂಡವಾಳ.

ಈ ಪರಿಯ ಶಕೀಲಾ ಮಲಯಾಳಂ ಮಾತ್ರವಲ್ಲ ತೆಲುಗು, ತಮಿಳುಗಳಲ್ಲೂ ಪಡ್ಡೆಗಳ ಒದ್ದೆ ಕನಸುಗಳ ನಾಯಕಿಯಾದವಳು. ಯಾವ ಕೋನದಿಂದ ನೋಡಿದರೂ ದುಂಡು ದುಂಡಾಗಿ ಕಾಣುವ, ಸೋತ ಮಲಯಾಳಿ ಚಿತ್ರರಂಗವನ್ನು ತನ್ನ 92 ಕೆಜಿಯ ದಢೂತಿ ದೇಹದಿಂದಲೇ ಎತ್ತಿ ನಿಲ್ಲಿಸಿದ ಈ ತೂಕದ ಹೆಣ್ಣು ಮಗಳ ಹೆಸರು ಶಕೀಲಾ. ಇಂದು ಆಕೆಗೆ ಹುಟ್ಟುಹಬ್ಬದ ಸಂಭ್ರಮ.

ಬೇಡಿಕೆಯ ದಿನಗಳಲ್ಲಿ ನಟಿ ಶಕೀಲಾಳ ಸಂಭಾವನೆ ದಿನಕ್ಕೆ ಒಂದು ಲಕ್ಷ ಇತ್ತ್ತಂತೆ. ಆಕೆ ನಟಿಸುವ ಚಿತ್ರದ ಬಜೆಟ್‌ 15 ರಿಂದ 20 ಲಕ್ಷ ರುಪಾಯಿ ಆಜುಬಾಜಿನಲ್ಲಿರುತ್ತಿತ್ತು.ಗಳಿಕೆ ಮಾತ್ರ ಯಾವ ಸೂಪರ್‌ ಹಿಟ್‌ ಸಿನಿಮಾಗೂ ಕಮ್ಮಿಯಿಲ್ಲ ಅನ್ನುವುದು ತಮಾಷೆಯ ಸಂಗತಿಯಾದರೂ ನಿಜ. ಆದರೆ ಈ ನಟಿಸಿದ ಕೆಂಪ, ಮೋನಾಲಿಸಾ, ಸರ್ಕಲ್ ರೌಡಿ ಕನ್ನಡ ಚಿತ್ರಗಳು ಮಾತ್ರಮಕಾಡೆ ಮಲಗಿದ್ದು ದುರಂತ ಎನ್ನಬೇಕು.

ಮುಖ್ಯ ವಾಹಿನಿ ಸಿನಿಮಾಗಳೊಂದಿಗೆ ಸೆಕ್ಸ್‌ ಸಿನಿಮಾಗಳನ್ನು ನಿಲ್ಲಿಸಿದ್ದು ಶಕೀಲಾ ಅಗ್ಗಳಿಕೆ. ಯಾವುದೋ ಕಿತ್ತು ಹೋದ ತಿಗಣೆಗಳ ಸಾಮ್ರಾಜ್ಯವಾದ ಥಿಯೇರ್‌ಗಳಿಂದ, ಅದ್ದೂರಿ ಥಿಯೇಟರ್‌ಗಳಿಗೆ ಸೆಕ್ಸ್‌ ಸಿನಿಮಾಗಳು ಪಾದ ಬೆಳೆಸಿದ್ದು ಶಕೀಲಾ ಮಹಾತ್ಮೆಯಿಂದಲೇ. 2001 ನೇ ಇಸವಿಯಲ್ಲಿ ಮಲಯಾಳಿಯಲ್ಲಿ ಬಿಡುಗಡೆಯಾದ 99 ಚಿತ್ರಗಳಲ್ಲಿ ಶಕೀಲಾ ನಟಿಸಿದ್ದ ಚಿತ್ರಗಳ ಸಂಖ್ಯೆ 40. ಇದೇ ಅವಧಿಯಲ್ಲಿ ಮುಮ್ಮೂಟ್ಟಿ 2 ಸಿನಿಮಾಗಳಲ್ಲಿ ನಟಿಸಿದ್ದರೆ, ಮೋಹನ್‌ಲಾಲ್‌ 4 ಸಿನಿಮಾಗಳಲ್ಲಿ ನಟಿಸಿದ್ದರು.

ಶಕೀಲಾ ಕಾಲ ಮುಗಿದೇ ಹೋಯಿತು, ಆಕೆಯ ಗ್ರಾಫ್‌ ಇಳಿಯುತ್ತಿದೆ ಎನ್ನುವುದು ನಗ್ನ ಸತ್ಯ. ಆದರೆ ಈಗಲೂ ನಿರ್ಮಾಪಕರು ತಮಗೊಂದು ಸಿನಿಮಾ ಮಾಡಿಕೊಡಿ ಎಂದು ಎಡತಾಕುವುದು ಮಾಮೂಲು. ಆಕೆ ಹ್ಞೂಂ ಅಂದರೆ ಸಾಲುಸಾಲು ನಿರ್ಮಾಪಕರು ಈಗಲೂ ಶಕೀಲಾ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ ಎಂಬುದು ಅತಿಶಯೋಕ್ತಿಯಾದರೂ ನಿಜ!


'ಉಹ್ಞೂಂ, ಇನ್ನು ಊದಿಕೊಳ್ಳುವಂತಿಲ್ಲ" ಹಾಗಂತ ವೈದ್ಯರು ಶಕೀಲಾಗೆ ಎಚ್ಚರಿಕೆ ನೀಡಿದ್ದಾರೆ. ಕಣ್ಣೋಟದಲ್ಲಿ, ದೇಹದ ಬಳುಕಿನಲ್ಲಿ ಪಡ್ಡೆಗಳ ಗುಂಡಿಗೆ ಡವಗುಟ್ಟಿಸುವ ಆಕೆಗೆ ಡಯಾಬಿಟಿಸ್ಸು. ದೇಹ ಮಾತು ಕೇಳುವುದಿಲ್ಲ . ಆ ಕಾರಣದಿಂದಲೇ ತೂಕ ಇಳಿಸಿಕೊ ಅನ್ನುತ್ತಿದ್ದಾರೆ ಡಾಕ್ಟರು. ಸಣ್ಣಗಾದರೆ ಮಾರ್ಕೆಟ್‌ ಕಳಕೋತೀಯ ಅನ್ನುತ್ತಾರೆ ಕೆಮರಾ ಕಣ್ಣಿನ ಡೈರೆಕ್ಟರು.ಶಕೀಲಾ ಪಾಲಿಗೆ ದೇಹವೇ ವರ, ದೇಹವೇ ಶಾಪ. ಅಯ್ಯೋ ಪಾಪ! ಇಷ್ಟೆಲ್ಲಾ ಹೇಳಲು ಕಾರಣ ಇಂದು (ನ.19)ಆಕೆಯ ಹುಟ್ಟುಹಬ್ಬ ಎಂಬುದನ್ನು ನೆನಪಿಸಲು. ಆಕೆಗೂ ಅಭಿಮಾನಿಗಳು ಇದ್ದಾರೆ ಅಂತೀರಾ? ಹಾಗಿದ್ದರೆ ನಿಮ್ಮ ಕಡೆಯಿಂದೊಂದು ಶುಭಾಶಯ ಗುಜರಾಯಿಸಿ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada