»   » ಜೂನಿಯರ್ ಎನ್ಟಿಆರ್ ವರದಕ್ಷಿಣೆ 500 ಕೋಟಿ!

ಜೂನಿಯರ್ ಎನ್ಟಿಆರ್ ವರದಕ್ಷಿಣೆ 500 ಕೋಟಿ!

Posted By:
Subscribe to Filmibeat Kannada

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಮದುವೆಯಾಗುತ್ತಿರುವ ಸುದ್ದಿ ಗೊತ್ತೆ ಇದೆ. ಲಕ್ಷ್ಮಿ ಪ್ರಶಾಂತಿ ಎಂಬ ಕನ್ಯೆಯನ್ನು ಜೂನಿಯರ್ ಎನ್ಟಿಆರ್ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಸುದ್ದಿ ಇದಲ್ಲ. ಹೊಸ ಸುದ್ದಿ ಏನಪ್ಪಾ ಅಂದ್ರೆ, ಈ ಮದುವೆಗೆ ಜೂನಿಯರ್ ಎನ್ಟಿಆರ್ ತೆಗೆದುಕೊಳ್ಳುತ್ತಿರುವ ವರದಕ್ಷಿಣೆ ಬರೋಬ್ಬರಿ ರು.500 ಕೋಟಿಗಳು!

ಸುದ್ದಿ ಮೂಲಗಳ ಪ್ರಕಾರ ಜೂನಿಯರ್ ಎನ್ಟಿಆರ್ ಈಗಾಗಲೇ ರು.500 ಕೋಟಿಯನ್ನು ಭಾವಿ ಅತ್ತೆಮಾವಂದಿರಿಂದ ಮುಂಗಡವಾಗಿ ಪಡೆದಿದ್ದಾರಂತೆ. ಲಕ್ಷ್ಮಿ ಪ್ರಶಾಂತಿ ಅವರೊಂದಿಗೆ ಜೂನಿಯರ್ ಎನ್ಟಿಆರ್ ಈಗಾಗಲೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಇನ್ನೇನಿದ್ದರೂ ಮಂಗಳವಾದ್ಯಗಳು ಮೊಳಗುವುದಷ್ಟೇ ಬಾಕಿ ಇದೆ.

ನರ್ನೆ ಶ್ರೀನಿವಾಸ ರಾವ್ ಮತ್ತು ನರ್ನೆ ಮಲ್ಲಿಕಾ ಅವರ ಮಗಳು ಲಕ್ಷ್ಮಿ ಪ್ರಶಾಂತಿ. ತೆಲುಗು ದೇಶಂ ಪಕ್ಷದ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಅವರ ಸೋದರ ಸೊಸೆಯೆ ನರ್ನೆ ಮಲ್ಲಿಕಾ. ಇನ್ನೂ ಹದಿನೆಂಟರ ಹರಿಯದ ಲಕ್ಷ್ಮಿ ಪ್ರಶಾಂತಿ ಹೈದರಾಬಾದಿನ ಖಾಸಗಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾರೆ.

ಲಕ್ಷ್ಮಿ ಪ್ರಶಾಂತಿ ಇನ್ನೂ ಅಪ್ರಾಪ್ತ ಬಾಲಕಿಯಾಗಿರುವ ಕಾರಣ ಆಕೆಯ ಮದುವೆ ಕಾನೂನು ಬಾಹಿರವಾಗುತ್ತದೆ ಎಂದು ಶಾಂತಿ ಪ್ರಸಾದ್ ಎಂಬ ವಕೀಲರೊಬ್ಬರು ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮಚಲಿಪಟ್ಟಣಂ ಲೀಗಲ್ ಸರ್ವಿಸ್ ಅಥಾರಿಟಿಯಲ್ಲಿ ದಾವಾ ಹೂಡಿದ್ದರು.

ಈ ಸಂಬಂಧ ಪ್ರಾಧಿಕಾರ ಜೂನಿಯರ್ ಎನ್ಟಿಆರ್ ಸೇರಿದಂತೆ ಚಂದ್ರಬಾಬು ನಾಯ್ಡು, ಹುಡುಗಿಯ ತಂದೆ ನರ್ನೆ ಶ್ರೀನಿವಾಸ ರಾವ್ ಅವರಿಗೆ ನೊಟೀಸ್ ಜಾರಿ ಮಾಡಿತ್ತು. ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದಾಡಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಜೂನಿಯರ್ ಎನ್ಟಿಆರ್ ಮದುವೆ ಮೇ ತಿಂಗಳಲ್ಲಿ ನಡೆಯುವುದು ಶತಸ್ಸಿದ್ಧ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada