ಮತ್ತೆ ಲೀಲಾವತಿ-ವಿನೋದ್ ರಾಜ್ ತೋಟಕ್ಕೆ ಬೆಂಕಿ

ನಟಿ ಲೀಲಾವತಿಯವ ಪಕ್ಕದ ಜಮೀನಿನ ಮಾಲೀಕ ಮಂಜುನಾಥ ಅವರ ಜಮೀನಿಗೆ ಹೊತ್ತಿಕೊಂಡ ಬೆಂಕಿ, ಇವರ ತೋಟಕ್ಕೂ ಹರಡಿದೆ ಎನ್ನಲಾಗಿದೆ. ಅವರ ತೋಟದಲ್ಲಿ ಬೆಳೆಗಳು ಇಲ್ಲದ ಕಾರಣ, ನಷ್ಟವೇನೂ ಹೆಚ್ಚಾಗಿ ಆಗಿಲ್ಲ. ಆದರೆ ನಟಿ ಲೀಲಾವತಿ ತೋಟದಲ್ಲಿ ಸಾಕಷ್ಟು ಬೆಳೆ ಹಾಗೂ ಮರಗಳು ಅಗ್ನಿಗಾಹುತಿಯಾಗಿವೆ. ವಿಷಯ ತಿಳಿದ ಸ್ಥಳೀಯ ಅಗ್ನಿಶಾಮಕ ದಳ ತಕ್ಷಣ ಅಲ್ಲಿ ಆಗಮಿಸಿತ್ತು.
ಕಳೆದ ಒಂದು ವರ್ಷದ ಹಿಂದೆ ಅದೇ ತಾಲೂಕಿನ ಮೈಲಹಳ್ಳಿ ಗ್ರಾಮದಲ್ಲಿರುವ ಅವರ ಇನ್ನೊಂದು ತೋಟಕ್ಕೂ ಬೆಂಕಿ ಬಿದ್ದಿತ್ತು. ಆ ಘಟನೆ ಹಳೆಯದಾಗುವ ಮುನ್ನವೇ ಮತ್ತೊಂದು ಘಟನೆ ಜರುಗಿದೆ. ಇದೊಂದು ಆಕಸ್ಮಿಕವೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದು ತಿಳಿದುಬಂದಿಲ್ಲ. ಸ್ಥಳೀಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Leelavathi Form House got fire by accidentally. Actor and her son Vinod Raj has taken immediate action on that and extinguish the fire.


Click it and Unblock the Notifications











