For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಬಿ ಜಯಶ್ರೀ ರಾಜ್ಯಸಭೆಗೆ ನಾಮಕರಣ

  By Rajendra
  |

  ಖ್ಯಾತ ರಂಗಭೂಮಿ ಕಲಾವಿದೆ ಬಿ ಜಯಶ್ರೀ ರಾಜ್ಯಸಭಾ ಸದಸ್ಯತ್ವದ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಜಯಶ್ರೀ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಐವರು ಸಾಧಕರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ.

  ಈ ಬಗ್ಗ್ಗೆ ಪ್ರತಿಕ್ರಿಯಿಸಿರುವ ಜಯಶ್ರೀ, ದೇವರಾಣೆಗೂ ಇದನ್ನು ನಿರೀಕ್ಷಿಸಿರಲಿಲ್ಲ. ಈ ಸ್ಥಾನಮಾನ ಹುಡುಕಿಕೊಂಡು ಬಂದಿರುವುದಕ್ಕೆ ಸಂತಸವಾಗಿದೆ. ರಂಗಭೂಮಿಗೆ ಇನ್ನಷ್ಟು ಸೇವೆ ಸಲ್ಲಿಸಲು ಇದರಿಂದ ಸಾಧ್ಯವಾಗಲಿದೆ. ರಂಗಭೂಮಿಗೆ ನನ್ನ ಕೈಲಾದಷ್ಟು ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ. ಸದ್ಯಕ್ಕೆ ಬಾಲಿವುಡ್ ನ 'ಲಕ್ಕಿ' ಚಿತ್ರದಲ್ಲಿ ಅಭಿನಯಿಸುತ್ತಿರುವ ಜಯಶ್ರೀ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸುವ ಸಿದ್ಧತೆಯಲ್ಲಿದ್ದಾರೆ.

  ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್, ಭಾಷಾ ಹಾಗೂ ಶಿಕ್ಷಣ ತಜ್ಞ ಡಾ.ರಾಮ್ ದಯಾಳ್ ಮುಂಡಾ, ಆರ್ಥಿಕ ತಜ್ಞ ಡಾ.ಬಾಲಚಂದ್ರ ಮುಂಗೇಕರ್, ಮಣಿಶಂಕರ್ ಅಯ್ಯರ್ ಅವರು ರಾಜ್ಯಸಭೆಗೆ ನಾಮಕರಣಗೊಂಡಿದ್ದಾರೆ. ಖ್ಯಾತ ರಂಗಕರ್ಮಿ ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಜಯಶ್ರೀ(60) ರಂಗಭೂಮಿಯಲ್ಲಿ ನಿರ್ದೇಶಕಿಯಾಗಿ, ನಟಿಯಾಗಿ, ಗಾಯಕಿಯಾಗಿ ಸಾಕಷ್ಟು ಪ್ರಯೋಗಗಳಿಗೆ ತಮ್ಮನ್ನು ತೊಡಗಿಕೊಂಡವರು.

  ಮೈಸೂರು ರಂಗಾಯಣ ನಿರ್ದೇಶಕಿಯಾಗಿ ನೇಮಕಗೊಂಡಿದ್ದ ಜಯಶ್ರೀ ಅಲ್ಲಿನ ಸಿಬ್ಬಂದಿಯ ಅಸಹಕಾರದಿಂದ ಮನನೊಂದು ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಜಯಶ್ರೀ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಕಾರ್ ಕಾರ್ ಕಾರ್ ಎಲ್ನೋಡಿ ಕಾರ್...ಎಂಬ ಸಿನಿಮಾ ಹಾಡಿನ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು. ರಂಗಗೀತೆಗಳನ್ನು ಅಷ್ಟೆ ಸೊಗಸಾಗಿ ಜಯಶ್ರೀ ಅವರು ಹಾಡುತ್ತಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X