»   » ಕೈಟ್ಸ್ ಚಿತ್ರಕ್ಕೆ ಬಸಂತಕುಮಾರ್ ಪಾಟೀಲ್ ಲಗಾಮು

ಕೈಟ್ಸ್ ಚಿತ್ರಕ್ಕೆ ಬಸಂತಕುಮಾರ್ ಪಾಟೀಲ್ ಲಗಾಮು

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಹಿಂದಿಯ 'ಕೈಟ್ಸ್ ' ಚಿತ್ರಕ್ಕೆ ಲಗಾಮು ಹಾಕಿದ್ದಾರೆ. ಈ ಚಿತ್ರ ರಾಜ್ಯದಾದ್ಯಂತ ಮೇ.21ರಂದು ಅಳತೆಗೂ ಮೀರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ 17 ಹಾಗೂ ಇನ್ನುಳಿದೆಡೆ 17 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಮಂಡಳಿನಿಯಮಗಳ ಪ್ರಕಾರ ಪರವಾನಗಿ ನೀಡುರುವಷ್ಟು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಬೇಕು. ಈ ಕುರಿತು 'ಕೈಟ್ಸ್ 'ಚಿತ್ರದ ವಿತರಕರಾದ ರಿಲಾಯನ್ಸ್ ಸಂಸ್ಥೆಗೆ ಈಗಾಗಲೆ ಸೂಚಿಸಲಾಗಿದೆ ಎಂದು ಬಸಂತಕುಮಾರ್ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ 17 ಹಾಗೂ ರಾಜ್ಯದ ಉಳಿದೆಡೆ 4 ಚಿತ್ರಮಂದಿರಗಳಲ್ಲಿ ಕೈಟ್ಸ್ ಬಿಡುಗಡೆ ಮಾಡಬೇಕು ಎಂಬುದು ಸದ್ಯಕ್ಕೆ ಚರ್ಚನೀಯ ಅಂಶವಾಗಿದೆ.

ಚಿತ್ರ ಬಿಡುಗಡೆಗೆ ಮಂಡಳಿ ಸೂಚಿಸಿದ ಎಲ್ಲ ಪ್ರಾದೇಶಿಕ ನಿಯಮಗಳನ್ನು ಪಾಲಿಸುವುದಾಗಿ ವಿತರಕರು ಒಪ್ಪಿಕೊಂಡಿದ್ದಾರೆ. ಅಶ್ಲೀಲ ಚಿತ್ರಗಳ ಪ್ರದರ್ಶನ ಹಾಗೂ ಅಸಹ್ಯಕರವಾದ ಪೋಸ್ಟರ್ ಗಳನ್ನು ಅಂಟಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಂಡಳಿ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಪರಭಾಷಾ ಚಿತ್ರಗಳ ಹಾವಳಿ ತಡೆಯಲು ಮುಂಬರುವ ಎರಡು ತಿಂಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡುವುದಾಗಿ ಬಸಂತಕುಮಾರ್ ಪಾಟೀಲ್ ಎಚ್ಚರಿಸಿದ್ದಾರೆ.

ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಗಳನ್ನು ಕೇವಲ ಬೆಂಗಳೂರಿನಲ್ಲಷ್ಟೇ ನಡೆಸದೆ ಹುಬ್ಬಳ್ಳಿ, ಗುಲ್ಬರ್ಗ, ವಿಜಾಪುರ ಹಾಗೂಮಂಗಳೂರಿನಲ್ಲಿ ಈ ವರ್ಷದಿಂದ ನಡೆಸಲಾಗುತ್ತದೆ ಎಂದು ಪಾಟೀಲ್ ವಿವರ ನೀಡಿದ್ದಾರೆ. ನಕಲಿ ಸಿಡಿ ಹಾವಳಿಯನ್ನು ತಡೆಯಲು ಸಮಿತಿಯೊಂದನ್ನು ಏರ್ಪಡಿಸುವುದಾಗಿ ಪಾಟೀಲ್ ಹೇಳಿದ್ದಾರೆ.

ಬಡಮಕ್ಕಳಿಗೆ ಉಚಿತ ಶಿಕ್ಷಣ
ವಿಜಾಪುರದ ಟಿ ಕೆ ಪಾಟೀಲ್ (ಬೆನಕಟ್ಟೆ) ಟ್ರಸ್ಟ್ ನ ದಾನಿಗಳಲ್ಲಿ ಒಬ್ಬರಾಗಿರುವ ಬಸಂತಕುಮಾರ್ ಪಾಟೀಲ್ ಪ್ರತಿವರ್ಷ ಬಡಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ 300ಕ್ಕೂ ಹೆಚ್ಚು ಲಂಬಾಣಿ ಮಕ್ಕಳಿಗೆ ಶಿಕ್ಷಣ, ವಸತಿ ಒದಗಿಸಲಾಗುತ್ತಿದೆ. ಈ ವರ್ಷ 300 ಮಕ್ಕಳನ್ನು (1 ರಿಂದ 4 ವರ್ಷ ವಯೋಮಿತಿಯ) ದತ್ತು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada