ಭಟ್ಟರ ಕಾಲೆಳೆದ ಪ್ರಸಂಗ ಹಾಗೂ ಯೋಗರಾಜ್

By Rajendra

ಚಿತ್ರ ನಿರ್ದೇಶಕ ಪದ್ಮನಾಭನ್ ದಯಾಳ್ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅವರ ಹೊಸ ಚಿತ್ರಕ್ಕೆ 'ಯೋಗರಾಜ್' ಎಂದು ನಾಮಕರಣ ಮಾಡಿದ್ದಾರೆ. ಆದರೆ ನಿರ್ದೇಶಕ ಯೋಗರಾಜ್ ಭಟ್ಟರಿಗೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ದಯಾಳ್. ಡಿಸೆಂಬರ್ 2ರಂದು ಈ ಚಿತ್ರ ಸೆಟ್ಟೇರುತ್ತಿದೆ.

'ಯೋಗರಾಜ'ನಾಗಿ ನವೀನ್ ಕೃಷ್ಣ ಕಾಣಿಸಲಿದ್ದಾರೆ. ಚಿತ್ರದಲ್ಲಿ ಗಡ್ದ ಬಿಟ್ಟ ದೇವದಾಸ್ ಪಾತ್ರವಂತೆ ಅವರದು. ನತದೃಷ್ಟ ಜ್ಯೋತಿಷಿಯಾಗಿ ಕಾಣಿಸಲಿರುವ ನವೀನ್ ಕೃಷ್ಣ ಲಕ್ ಆಗಾಗ ಕೈಕೊಡುತ್ತಿರುತ್ತಂತೆ. ನಾಯಕಿ ಪಾತ್ರಕ್ಕೆ ನೀತೂ ಹೆಸರು ಬಹುತೇಕ ಖಚಿತವಾಗಿದೆ.

ನಿರ್ದೇಶಕ ಯೋಗರಾಜ್ ಭಟ್ಟರನ್ನು ಕಾಲೆಳೆಯುತ್ತಿರುವುದು ಇದೇ ಮೊದಲಲ್ಲ ಬಿಡಿ. ಈ ಹಿಂದೆ ಸಾಕಷ್ಟು ಬಾರಿ ಹೀಗಾಗಿದೆ. ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅವರನ್ನು ಚೇಡಿಸುವ ಸಾಕಷ್ಟು ಪ್ರಸಂಗಗಳು ಚಿತ್ರಗಳಲ್ಲಿ ಹಾದುಹೋಗಿವೆ. ಸ್ಯಾಂಪಲ್‌ಗಾಗಿ ಒಂದೆರಡು ಪ್ರಸಂಗಗಳು.

ಪ್ರೀತಂ ಗುಬ್ಬಿ ನಿರ್ದೇಶನದ 'ಹಾಗೆ ಸುಮ್ಮನೆ' ಚಿತ್ರದಲ್ಲಿ ಹುಡುಗನೊಬ್ಬ ನನ್ನ ಹೆಸರು ಗುಬ್ಬಿ ನನ್ನ ತಂದೆಯ ಹೆಸರು ಯೋಗರಾಜ್ ಎನ್ನುತ್ತಾನೆ. 'ಲಿಫ್ಟ್ ಕೊಡ್ಲಾ' ಚಿತ್ರದಲ್ಲಿ ರಾಜು ತಾಳಿ ಕೋಟೆಗೆ ಕೋಮಲ್ ಹೀಗೆನ್ನುತ್ತಾರೆ. ನಿನ್ನ ಹೆಸರು ಯೋಗರಾಜ್, but ನೀನು ಚಾಲಕ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಎಲ್ಲಾ ಯೋಗರಾಜ್ ಭಟ್ಟರ ಮಹಾತ್ಮೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X