»   »  ಗುರುರಾಜ್ ಜಗ್ಗೇಶ್ ಗಿಲ್ಲಿಗೆ ಡಿಟಿಎಸ್ ಲೇಪನ

ಗುರುರಾಜ್ ಜಗ್ಗೇಶ್ ಗಿಲ್ಲಿಗೆ ಡಿಟಿಎಸ್ ಲೇಪನ

Subscribe to Filmibeat Kannada

ಜಗ್ಗೇಶ್ ಪುತ್ರ ಗುರುರಾಜ ನಾಯಕ ನಟನಾಗಿ ಅಭಿನಯಿಸಿರುವ ಗಿಲ್ಲಿ ಚಿತ್ರವನ್ನು ರಾಘವಲೋಕಿ ನಿರ್ದೇಶಿಸಿದ್ದಾರೆ. ನಂದಿನಿ ಲೇಔಟ್ ಹಾಗೂ ಬೆಂಗಳೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದ ಡಬ್ಬಿಂಗ್ ರೀರೆಕಾರ್ಡಿಂಗ್ ಕಾರ್ಯ ಸಂಪೂರ್ಣಗೊಂಡಿದ್ದು, ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಕಳೆದ 15 ರಿಂದ ಡಿ.ಟಿ.ಎಸ್. ಅಳವಡಿಕೆ ಕಾರ್ಯ ನಡೆಯುತ್ತಿದೆ.

ನಾಯಕ ಗುರುರಾಜ್ ತಂದೆಯಂತೆಯೇ ಪ್ರತಿಭಾವಂತ. ಇದು ರೀಮೇಕ್ ಚಿತ್ರವಾದರೂ ನಾಯಕ ಪಾತ್ರವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಆದರೆ, ಗುರುರಾಜ ಲೀಲಾಜಾಲವಾಗಿ ಅಭಿನಯಿಸಿದ್ದಾರೆ ಎನ್ನುತ್ತಾರೆ ನಿರ್ಮಾಪಕ ಅಣಜಿ ನಾಗರಾಜ್. ಉತ್ತರ ಭಾರತ ಮೂಲದ ಸುಂದರಿ ರಾಕುಲ್ ಪ್ರೀತ್ ಸಿಂಗ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದೊಂದು ದುರಂತೆ ಪ್ರೇಮಕಥೆಯಾಗಿದ್ದು, 5ಹಾಡುಗಳು ಈ ಚಿತ್ರದಲ್ಲಿವೆ. ನಿರ್ದೇಶಕ ರಾಘವಲೋಕಿಯವರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರಿಂದ ಚಿತ್ರಕ್ಕೆ ಸ್ವಲ್ಪ ತಡೆಯುಂಟಾಗಿತ್ತು, ಈಗ ಅವರು ಚೇತರಿಸಿಕೊಂಡು ಕೆಲಸ ಮುಂದುರೆಸುತ್ತಿದ್ದಾರೆ. ಮುಂಗಾರು ಮಳೆಯ ಮೋಡಿಗಾರ ಎಸ್. ಕೃಷ್ಣರ ಛಾಯಾಗ್ರಹಣ, ಯುವನ್ ಶಂಕರ ರಾಜರ ಸಂಗೀತ ಸಂಯೋಜನೆ ಇದ್ದು, ಸುಧಾ ಬೆಳವಾಡಿ, ವೀಣಾ ವೆಂಕಟೇಶ್, ಶ್ರೀನಿವಾಸ್, ಯತಿರಾಜ್ (ಜಗ್ಗೇಶ್ ಪುತ್ರ) ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada