ರಚನಾ ಮೌರ್ಯ ಎಂಬ ಸೌಂದರ್ಯದ ಸರಕು!
ಕನ್ನಡದಲ್ಲಿ ಮಾತ್ರ ನಾನು ಐಟಂ ಹಾಡುಗಳಲ್ಲಿ ಕುಣಿದಿದ್ದೇನೆ. ಉಳಿದಂತೆ ತಾವೊಬ್ಬ ಉತ್ತಮ ನಟಿ. ಮುಂಬೈ ಹಾಗೂ ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿ ನನಗಿರುವ ಇಮೇಜೆ ಬೇರೆ. ನನಗೆ ಒಳ್ಳೆ ಅವಕಾಶ ಕೊಟ್ಟರೆ 'ಐಟಂ ರಾಣಿ' ಎಂಬುದನ್ನು ತಾನು ಸುಳ್ಳು ಮಾಡುವುದಾಗಿ ಸವಾಲೆಸೆಯುತ್ತಾರೆ ರಚನಾ ಮೌರ್ಯ.
ನಾನು ನಟಿಸಿದ ಬಹುತೇಕ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಸೆಕ್ಸ್ ಬಾಂಬ್ ನಂತೆ ಸಿಡಿದಿವೆ. ಜನ ನನ್ನ ಕುರಿತು ಏನೇ ಅಂದುಕೊಳ್ಳಲ್ಲಿ, ಏನಾದರೂ ಬರೆದುಕೊಳ್ಳಲಿ ನಾನು ನಟಿಸಿದ ಚಿತ್ರಗಳಲ್ಲಿನ ಹಾಡುಗಳೇ ಕಾಸಿನ ಮಳೆ ಸುರಿಸಿವೆ ಎಂಬುದಂತೂ ಸತ್ಯ. ಆ ಕಾರಣಕ್ಕೆ ನನಗೆ ಹೆಮ್ಮೆ ಅನ್ನಿಸುತ್ತದೆ ಎಂಬುದು ರಚನಾರ ವಾದ.
'ಉಪ್ಪಿ ದಾದಾ ಎಂಬಿಬಿಎಸ್' ಚಿತ್ರದ ಹಾಡೊಂದರ ಮೂಲಕ ರಚನಾ ಕನ್ನಡಕ್ಕೆ ಅಡಿಇಟ್ಟರು. ಜಂಗ್ಲಿ ಚಿತ್ರದ ಐಟಂ ಹಾಡೊಂದರಲ್ಲೂ ರಚನಾ ಕುಣಿದಿದ್ದಾರೆ. ಪ್ರಸ್ತುತ ಬಿ.ಸಿ ಪಾಟೀಲರ ಸಲ್ಯೂಟ್ ಚಿತ್ರದಲ್ಲಿ ಬ್ಯುಸಿ. ತಾವು ಯಾರೊಬ್ಬರಿಗೂ ಸ್ಪರ್ಧಿ ಅಲ್ಲ. ಉತ್ತಮ ಅವಕಾಶಗಳು ಸಿಕ್ಕಿದರೆ ತಾನೇನು ಎಂದು ತೋರಿಸುತ್ತೇನೆ. ನಿರ್ಮಾಪಕರು ನನ್ನನ್ನು ಐಟಂ ಹಾಡುಗಳಿಗಾಗಿಯೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರದ ಐಟಂ ಹಾಡುಗಳಿಗೆ ಸಂಭಾವನೆ ಸಹ ಚೆನ್ನಾಗಿದೆ ಎಂಬ ಮಾತನ್ನು ಹೇಳಲು ರಚನಾ ಮರೆಯಲಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸೂರಿ ಮಹತ್ವಾಕಾಂಕ್ಷೆಯ ಜಂಗ್ಲಿ ಚಿತ್ರದ ಟ್ರೈಲರ್
ದುಗ್ಗಾಣಿ ಖರ್ಚಿಲ್ಲದೆ ಬಂದ ಜಂಗ್ಲಿ ಧ್ವನಿಸುರುಳಿ!
ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್


Click it and Unblock the Notifications












