twitter
    For Quick Alerts
    ALLOW NOTIFICATIONS  
    For Daily Alerts

    ನೈಜ ಸಂಗೀತದ ಕಾರಂಜಿಗೆ ಸೆನ್ಸಾರ್ ಮುಕ್ತ ಪ್ರಶಂಸೆ

    By Staff
    |

    Karanji clears censor
    ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ. ಒಂದು ಚಿತ್ರ ಬಂದುಹೋದದ್ದು ನೆನಪಿನಲ್ಲುಳಿಯದಿದ್ದರೂ ಆ ಚಿತ್ರದ ಹಾಡುಗಳು ಮಾತ್ರ ಎಲ್ಲರ ಬಾಯಲ್ಲೂ ಗುನುಗುತ್ತಿರುತ್ತವೆ. ಅದರಲ್ಲೂ ಸಂಗೀತವೇ ಪ್ರಧಾನವಾಗಿರುವ ಚಿತ್ರಗಳೆಂದಮೇಲೆ ಆ ಚಿತ್ರದ ಮಹತ್ವವೇ ಬೇರೆ. ಅಂಥಾದ್ದೊಂದು ಚಿತ್ರ ಸದ್ಯದಲ್ಲೇ ತೆರೆಯಮೇಲೆ ಕಾಣಿಸಿಕೊಳ್ಳಲಿದೆ.

    ಸದಬಿರುಚಿಯ ಚಿತ್ರಗಳ ನಿರ್ಮಾಪಕ ಎಂದೇ ಹೆಸರಾದ ಎನ್.ಎಂ. ಸುರೇಶ್, ನಿರ್ಮಾಣದ ಉತ್ಸಾಹಿ ಯುವಕ ಶ್ರೀಧರ್ ರವರ ಕಥೆ-ಚಿತ್ರಕಥೆ-ನಿರ್ದೇಶನದ ಕಾರಂಜಿ ಸಂಗೀತ ಪ್ರೇಮಿಗಳಿಗೆ, ಚಿತ್ರ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಲಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಕೂಡ ಹೊರಬಂದು ಕಳೆದವಾರ ಸೆನ್ಸಾರ್ ಮಂಡಳಿಯ ಸದಸ್ಯರ ಮುಂದೆ ಪ್ರದರ್ಶನಗೊಂಡಿತು. ಬಹಳದಿನಗಳ ನಂತರ ಒಂದು ಕಿವಿಗೆ ಇಂಪಾದ, ಕಣ್ಣಿಗೆ ತಂಪಾದ ಸಂಗೀತ ದೃಶ್ಯಗಳನ್ನೊಳಗೊಂಡ ಚಿತ್ರನೋಡಿದ ಅನುಭವವಾಯಿತು ಎಂದು ಮುಕ್ತಕಂಠದಿಂದ ಪ್ರಶಂಸಿಸಿ 'ಯು'ಪ್ರಮಾಣ ಪತ್ರ ನೀಡಿದ್ದಾರೆ.

    ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ವೀರಸಮರ್ಥ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಗಿಟಾರ್, ಡ್ರಮ್ಸ್, ಹಾಗೂ ಕೊಳಲು ಸೇರಿದಂತೆ ಇನ್ನೂ ಅನೇಕ ನೈಜ ವಾದ್ಯ ಪರಿಕರಗಳನ್ನು ಬಳಸಿ ಈ ಚಿತ್ರದ ಸಂಗೀತಕ್ಕೆ ನೈಜತೆಯ ಜೀವ ತುಂಬಿದ್ದಾರೆ. ಅಲ್ಲದೇ, ಇಡೀ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ತುಂಬಿರುವುದರಿಂದ ಚಿತ್ರದಲ್ಲಿ ಹೊಸತನ ಕೂಡ ಎದ್ದುಕಾಣುತ್ತದೆ. ಇನ್ನೊಂದು ಮ್ಯೂಸಿಕಲ್ ಹಿಟ್ ಆಗುತ್ತದೆ ಎನ್ನುತ್ತಾರೆ 'ಎಕ್ಸ್ ಕ್ಯೂಸ್ ಮಿ' ನಿರ್ಮಾಪಕ ಎನ್.ಎಂ. ಸುರೇಶ್. ಗುರು ಪ್ರಶಾಂತರ ಅತ್ಯುತ್ತಮ ಛಾಯಾಗ್ರಹಣ ಇದ್ದು, ವಿಜಯರಾಘವೇಂದ್ರ, ಸುರ್ ಖ್ಯಾತಿಯ ಗೌರಿ ಕಾರ್‍ನಿಕ್, ಚಂದನ್, ಚೇತನ್, ನಂಜುಂಡ, ರಾಜ್ ಹಾಗೂ ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್, ಸುಧಾ ಬೆಳವಾಡಿ, ಅರವಿಂದ ಶ್ರೀಧರ ಅಲ್ಲದೆ ನಿರ್ಮಾಪಕ ಎನ್.ಎಂ. ಸುರೇಶ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಕನ್ನಡಕ್ಕೆ ಗುಂಗುರು ಕೂದಲ ಚೆಲುವೆ ಗೌರಿ!
    ಸಂಗೀತಮಯ ಚಿತ್ರ ಕಾರಂಜಿ ಮುನ್ನೋಟ

    Friday, March 20, 2009, 14:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X