ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದ ಮಾಲಾಶ್ರೀ
ಗೋಲ್ಡನ್ ಗರ್ಲ್ ರಮ್ಯಾರನ್ನು ಕಾಂಗ್ರೆಸ್ ಕೈಹಿಡಿದರೆ, ಮುಂಗಾರು ಮಳೆ ಹುಡುಗಿ ಪೂಜಾಗಾಂಧಿಗೆ ಜೆಡಿಎಸ್ ತೆನೆ ಹೊರುವ ಚಾನ್ಸ್ ನೀಡಿದೆ. ಇನ್ನು ಬಿಜೆಪಿಯಲ್ಲಿ ಕಮಲದಂತೆ ತಾರಾ ಅರಳುತ್ತಿದ್ದಾರೆ. ಇತ್ತೀಚೆಗೆ ಮಾಲಾಶ್ರೀ ಕೂಡ ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದರು.
ಒಂದು ಕಾಲದಲ್ಲಿ ಕನಸಿನ ರಾಣಿಯಾಗಿ ಕನ್ನಡ ಚಿತ್ರಪ್ರೇಮಿಗಳ ಹೃದಯ ಗೆದ್ದಿದ್ದರು ಮಾಲಾಶ್ರೀ. ಈಗ ಆಕ್ಷನ್ ಕ್ವೀನ್ ರೂಪದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. 'ಶಕ್ತಿ' ಚಿತ್ರಕ್ಕೆ ತೋರಿದ ಪ್ರೀತಿಗೆ ಮಾಲಾಶ್ರೀ ಚಿತ್ರದುರ್ಗದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮು ದಂಪತಿಗಳು, ತಮಗೆ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ. ಅವರಿಗೆ ರಾಜಕೀಯ ಕ್ಷೇತ್ರ ಇಷ್ಟವಿಲ್ಲವಂತೆ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೆ ಇರುವುದು ಅಪಾಯಕಾರಿ ಬೆಳವಣಿಗೆ. ವಿತರಕರಿಗೆ ಲಾಭ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕನ್ನಡ ಚಿತ್ರಗಳ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. (ಏಜೆನ್ಸೀಸ್)


Click it and Unblock the Notifications











