»   »  ಯಾರದು ಚಿತ್ರಕ್ಕೆ ಡಿಟಿಎಸ್ ಮುಕ್ತಾಯ

ಯಾರದು ಚಿತ್ರಕ್ಕೆ ಡಿಟಿಎಸ್ ಮುಕ್ತಾಯ

Subscribe to Filmibeat Kannada
Vinodraj and Leelavathi
ಶ್ರೀಮತಿ ಲೀಲಾವತಿ ಕಂಬೈನ್ಸ್ ಲಾಂಛನದಲ್ಲಿ ನಟಿ, ನಿರ್ಮಾಪಕಿ ಎಂ.ಲೀಲಾವತಿ ನಿರ್ಮಿಸುತ್ತಿರುವ ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಯಾರದು ಚಿತ್ರಕ್ಕೆ ಬಾಲಾಜಿ ಸ್ಟುಡಿಯೋದಲ್ಲಿ ಡಿಟಿಎಸ್ ಕಾರ್ಯ ಪೂರ್ಣಗೊಂಡಿತು. ಚಿತ್ರಕ್ಕೆ ಛಾಯಾಗ್ರಹಣ ನಾಗೇಶ್ ಆಚಾರ್ಯ, ಸಂಗೀತ ಅಖಿಲ್.ಜಿ., ಸಂಕಲನ ಶ್ರೀನಿವಾಸ್ ಬಾಬು ಕಲೆ ತಮ್ಮಾ ಲಕ್ಷ್ಮಣ್, ಸಾಹಸ ಕೌರವ ವೆಂಕಟೇಶ್, ಸಹನಿರ್ದೇಶನ ಜಾನ್ ಮತ್ತು ರಾಜು, ನೃತ್ಯ - ಹರಿಕೃಷ್ಣ, ನಿರ್ವಹಣೆ ನಾಗರಾಜ್ ಕೆ.ಎನ್.ಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ವಿನೋದ್ ರಾಜ್, ಅಶ್ವಿನಿ, ಲೀಲಾವತಿ, ನಟರಾಜು, ಅನುಶ್ರೀ, ಸುಬ್ರಮಣಿ, ಸುಮನ್, ಪವನ್, ಆರ್.ಕೆ.ಮಂಜು ಅಭಿ, ಶಾಂತಕುಮಾರ್, ಸದಾಶಿವ ಬ್ರಹ್ಮಾವರ್, ಚೇತನ್ ರಾಮರಾವ್ ಮುಂತಾದವರಿದ್ದಾರೆ.

ಖಡಕ್ ಮಾತಿನ ಭಾಗ ಮುಕ್ತಾಯ
ಓಂಕಾರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ.ದೇವರಾಜ್ ನಿರ್ಮಿಸುತ್ತಿರುವ ಜಿ.ಕೆ.ಮುದ್ದುರಾಜ್ ನಿರ್ದೇಶನದ ಖಡಕ್ ಚಿತ್ರಕ್ಕೆ ಮಾತನ ಭಾಗ ಪೂರ್ಣಗೊಂಡಿದ್ದು ೪ ಹಾಡುಗಳ ಚಿತ್ರೀಕರ್ಣ ಭಾಕಿ ಇರುವ ಈ ಚಿತ್ರದ ಚಿತ್ರಕಥೆ ಕೆ.ಪಿ.ಭವಾನಿ ಶಂಕರ್, ಸಂಗೀತ ಚಂದ್ರಕಾಂತ್, ಛಾಯಾಗ್ರಹಣ: ಗಣೇಶ್, ಸಂಭಾಷಣೆ, ಸಹನಿರ್ದೇಶನ ಕೈಲಾಸ್ ಮಳವಳ್ಳಿ, ಸಾಹಸ : ಹ್ಯಾರಿಸ್ ಜಾನಿ, ನಿರ್ಮಾಣ ನಿರ್ವಹಣೆ: ಎ.ವಿ.ಎಂ.ಚೆನ್ನಯ್ಯ, ತಾರಾಗಣದಲ್ಲಿ ಜಿತೇಶ್, ಪದ್ಮಾವತಿ, ಜೈಜಗದೀಶ್, ಓಂಪ್ರಕಾಶ್, ಮಾರುತಿ, ಲಂಬೂನಾಗೇಶ್, ಜಯಲಕ್ಷ್ಮಿ, ಜೋಸೈಮನ್, ನವನೀತ, ವೆಂಕಟಾದ್ರಿ, ಎಚ್.ಎಂ.ಟಿ.ಗೋವಿಂದರಾವ್ ತನುಜ, ಹುಬ್ಳಿ ಮಂಜುಳ, ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada