»   »  ಚಿತ್ರ ಪ್ರದರ್ಶನ ವೇಳೆ ಬದಲಾವಣೆಗೆ ಸರ್ಕಾರ ಅಸ್ತು

ಚಿತ್ರ ಪ್ರದರ್ಶನ ವೇಳೆ ಬದಲಾವಣೆಗೆ ಸರ್ಕಾರ ಅಸ್ತು

Subscribe to Filmibeat Kannada
KFCC President Jyamala
ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ವೇಳೆ ಬದಲಾವಣೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು ಹೊಸ ಸಮಯ ಮೇ 22 ರಿಂದ ಜಾರಿಗೆ ಬರಲಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಪ್ರದರ್ಶನ ವೇಳೆಯನ್ನು ಬದಲಾಯಿಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಮುಖ ಬೇಡಿಕೆ ಸಲ್ಲಿಸಿತ್ತು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಹಾಗೂ ಇತರ ಪದಾಧಿಕಾರಿಗಳು ಗೃಹ ಸಚಿವ ವಿ.ಎಸ್.ಆಚಾರ್ಯ ಅವರೊಂದಿಗೆ ಮಂಗಳವಾರ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿ ಎಸ್ ಆಚಾರ್ಯ, ಬೆಂಗಳೂರಿನ ಶಾಂತಿ, ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಪ್ರದರ್ಶನ ವೇಳೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಬೆಳಗ್ಗೆ 11.15, ಮಧ್ಯಾಹ್ನ 2.30, ಸಂಜೆ 6.15 ಹಾಗೂ ಕೊನೆಯ ಪ್ರದರ್ಶನ ರಾತ್ರಿ 8.30ಕ್ಕೆ ಆರಂಭವಾಗಲಿದೆ ಎಂದು ಆಚಾರ್ಯ ತಿಳಿಸಿದರು. ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಈ ಹೊಸ ಪ್ರದರ್ಶನ ವೇಳಾಪಟ್ಟಿ ಅನ್ವಯವಾಗಲಿದೆ. ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸರಕಾರದ ಜತೆ ಮೂರು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಹೊಸ ವೇಳಾಪಟ್ಟಿಗೆ ಅನುಮತಿ ನೀಡಲಾಯಿತು.

ಬಾರ್ ಮತ್ತು ರೆಸ್ಟೊರೆಂಟ್ ಗಳನ್ನು ಹೊರತುಪಡಿಸಿ ಹೋಟೆಲ್ ಗಳು ಮೇ 22ರಿಂದ ರಾತ್ರಿ 12 ಗಂಟೆಯವರೆಗೂ ತೆರೆಯಬಹುದಾಗಿದೆ. ಬಾರ್ ಮತ್ತು ರೆಸ್ಟೋರೆಂಟ್ ಗಳು ಈ ಹಿಂದಿನ ಸಮಯದಂತೆ ರಾತ್ರಿ 11ಗಂಟೆಗೆ ಮುಚ್ಚಬೇಕಾಗುತ್ತದೆ ಎಂದು ಆಚಾರ್ಯತಿಳಿಸಿದರು. ನಕಲಿ ಸಿಡಿ ಹಾವಳಿಯನ್ನು ತಡೆಗಟ್ಟಲು ಗೂಂಡಾ ಕಾಯಿದೆಯನ್ನು ಜಾರಿಗೆ ತರಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಆಚಾರ್ಯ ಭರವಸೆ ನೀಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada