»   » ಚಿತ್ರನಟಿ ಉಮಾಶ್ರೀಗೆ ಎನ್ಟಿಆರ್ ಪುರಸ್ಕಾರ

ಚಿತ್ರನಟಿ ಉಮಾಶ್ರೀಗೆ ಎನ್ಟಿಆರ್ ಪುರಸ್ಕಾರ

Posted By:
Subscribe to Filmibeat Kannada

ಕನ್ನಡದ ಹೆಸರಾಂತ ನಟಿ ಉಮಾಶ್ರೀ ಅವರನ್ನು ಎನ್ಟಿಆರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ಪದ್ಮಶ್ರೀ ಡಾ.ಎನ್.ಟಿ.ರಾಮಾರಾವ್ ಅವರ 88ನೇ ಜಯಂತಿ ಅಂಗವಾಗಿ ಈ ಪ್ರಶಸ್ತಿಯನ್ನು ಜು.21ರಂದು ಪ್ರದಾನ ಮಾಡಲಾಗುತ್ತಿದೆ.

ಅಖಿಲ ಕರ್ನಾಟಕ ಎನ್ ಟಿ ಆರ್ ಅಭಿಮಾನಿಗಳ ಸಂಘವು ಬೆಂಗಳೂರು ಪುರಭವನದಲ್ಲಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಸಂಜೆ 5.30ಕ್ಕೆ ಈ ಪ್ರಶಸ್ತಿಯನ್ನು ಉಮಾಶ್ರೀ ಅವರಿಗೆ ಪ್ರದಾನ ಮಾಡಲಾಗುತ್ತದೆ. ಸಂಘವು ಪ್ರತಿವರ್ಷ ಎನ್ಟಿಆರ್ ಜಯಂತಿಯಂದು ಚಲನಚಿತ್ರ ಕಲಾವಿದರು ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿಯನ್ನು ಕೊಡುತ್ತಾ ಬಂದಿದೆ.

ಉಮಾಶ್ರೀ ಅವರೊಂದಿಗೆ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ.ಎನ್ ಕೆ ವೆಂಕಟರಮಣ ಹಾಗೂ ಕುಪ್ಪಂ ದ್ರಾವಿಡ ವಿವಿ ಕನ್ನಡ ಮತ್ತು ಭಾಷಾಂತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎನ್ ಲಕ್ಷ್ಮೀದೇವಿ ಅವರು ಎನ್ಟಿಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ದಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada