For Quick Alerts
  ALLOW NOTIFICATIONS  
  For Daily Alerts

  ಸೆಂಟಿಮೆಂಟ್ ಸಾಯಿಪ್ರಕಾಶ್ 'ಸಂಸಾರದಲ್ಲಿ ಗೋಲ್‌ಮಾಲ್

  By Rajendra
  |

  ತೆಲುಗಿನ ಯಶಸ್ವಿ ಚಿತ್ರ 'ಆದಿವಾರಂ ಆಡವಾಳ್ಳಕು ಸೆಲವು ಕಾವಾಲಿ' (ಭಾನುವಾರ ಮಹಿಳೆಯರಿಗೆ ರಜೆ ಬೇಕು) ಎಂಬ ಮಾರುದ್ದ ಟೈಟಲ್ ಚಿತ್ರ ಈಗ ಕನ್ನಡಕ್ಕೆ ಯಥಾವತ್ತಾಗಿ ರೀಮೇಕ್ ಆಗುತ್ತಿದೆ. ಈ ಚಿತ್ರಕ್ಕೆ 'ಸಂಸಾರದಲ್ಲಿ ಗೋಲ್ ಮಾಲ್' ಎಂದು ಹೆಸರಿಡಲಾಗಿದೆ.

  ತೆಲುಗಿನಲ್ಲಿ 2007ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಸುಹಾಸಿನಿ, ಬ್ರಹ್ಮಾನಂದಂ, ಪ್ರಕಾಶ್ ರೈ ಅಭಿನಯಿಸಿದ್ದರು. ಕನ್ನಡದಲ್ಲಿ ರೀಮೇಕ್, ಭಕ್ತಿರಸ, ಹಾಸ್ಯ, ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ಸಾಯಿಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

  ಉಮಾಶ್ರೀ-ರಾಜು ತಾಳಿಕೋಟೆ, ಮೋಹನ್-ಅನುಪ್ರಭಾಕರ್, ಸಿಹಿಕಹಿ ಚಂದ್ರು-ತಾರಾ, ತಬಲಾನಾಣಿ-ಲಕ್ಷ್ಮಿ, ಸಾಧುಕೋಕಿಲ-ನಯನಕೃಷ್ಣ ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ಇಷ್ಟೆಲ್ಲಾ ಕಲಾವಿದರಿದ್ದರೂ ಎಲ್ಲರಿಗೂ ಸಮಾನ ಪ್ರಾತಿನಿಧ್ಯತೆ ನೀಡಲಾಗಿದೆ ಎಂದಿದ್ದಾರೆ ಸಾಯಿಪ್ರಕಾಶ್.

  ಬೆಂಗಳೂರಿನ ರಾಜರಾಜೇಶ್ವರಿ ನಗರದ ಗ್ಲೋಬಲ್ ವಿಲೇಜ್ ಅಪಾರ್ಟ್‌ಮೆಂಟ್‌ನಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. 'ಮೂರನೇ ಕ್ಲಾಸ್ ಮಂಜ ಬಿ.ಕಾಂ ಭಾಗ್ಯ' ಚಿತ್ರ ನಿರ್ಮಿಸಿದ್ದ ಪ್ರಭಾಕರ ರೆಡ್ಡಿ ನಿರ್ಮಾಣದ ಚಿತ್ರ. ಸಾಧುಕೋಕಿಲ ಸಂಗೀತವಿರುವ ಚಿತ್ರದಲ್ಲಿ ಶಕೀಲಾ ಒಂದು ಹಾಡಿನಲ್ಲಿ ಕುಣಿದು ರಂಜಿಸಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Director Saiprakash is back with a hilarious movie titled as Samsaradalli Golmaal. The successful Telugu film ‘Aadivaram Adavallaku Selavu Kavali’ (Women want Holiday on Sunday) is remade in Kannada. Sadhu Kokila scors music for this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X