»   » ಸದ್ಯದಲ್ಲೆ ತೆರೆಯ ಮೇಲೆ ಸ್ಯಾಂಡಲ್‌ವುಡ್ ಗುರು

ಸದ್ಯದಲ್ಲೆ ತೆರೆಯ ಮೇಲೆ ಸ್ಯಾಂಡಲ್‌ವುಡ್ ಗುರು

Posted By:
Subscribe to Filmibeat Kannada

ಕಿರುತೆರೆ ಜಾಹಿರಾತು, ಸಾಕ್ಷ್ಯಚಿತ್ರಗಳಲ್ಲಿ ಅಭಿನಯ ಹಾಗೂ ಕಾರ್ಯಕ್ರಮಗಳ ನಿರ್ವಹಣೆ ಹೀಗೆ ಹಲವು ವಿಭಾಗಗಳಲ್ಲಿ ಅನುಭವ ಪಡೆದಿರುವ ಮಾನಸ್ ನಿರ್ದೇಶನ ಮಾಡುವುದರೊಂದಿಗೆ ನಾಯಕನಾಗೂ ನಟಿಸಿರುವ 'ಸ್ಯಾಂಡಲ್‌ವುಡ್ ಗುರು' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ.

ಚಿತ್ರ ಸದ್ಯದಲ್ಲೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ನಿರ್ದೇಶಕರು 'ಸ್ಯಾಂಡಲ್‌ವುಡ್ ಗುರು' ಹಾಸ್ಯ ಸನ್ನಿವೇಶಗಳಿಲ್ಲದ ವಿಭಿನ್ನ ಚಿತ್ರವೆನ್ನುತ್ತಾರೆ. ಬೆಂಗಳೂರು ಮೂವೀಸ್‌ನ ಸ್ಪೆನ್ಸರ್ ಮ್ಯಾಥ್ಯೂ ಹಾಗೂ ಗುಡ್‌ಬೀ ಹನಿ ಪ್ರೊಡಕ್ಷನ್ಸ್‌ನ ಚಾಂಪ್ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಜೇಮ್ಸ್ ಆರ್ಕಿಟೆಕ್ ಅವರ ಸಂಗೀತವಿದೆ.

ಸಂತೋಷ್ ಛಾಯಾಗ್ರಹಣ, ಡಿ.ಜೆ.ಮಹೇಶ್‌ಕುಮಾರ್ ಸಾಹಿತ್ಯವಿರುವ 'ಸ್ಯಾಂಡಲ್‌ವುಡ್ ಗುರು' ಚಿತ್ರದ ನಾಯಕಿಯಾಗಿ ಹುಬ್ಬಳ್ಳಿ ಹುಡುಗಿ ಅಕ್ಷತಾ ಶೆಟ್ಟಿ ಅಭಿನಯಿಸಿದ್ದಾರೆ. ನವ್ಯಾ, ಆಕಾಂಕ್ಷ, ಸಿ.ಆರ್.ರಮೇಶ್, ಸೌಜನ್ಯ, ಮಾಸ್ಟರ್ ಚಿರಂಜೀವಿ, ಮಾಸ್ಟರ್ ಸುಶಾಂತ್, ಬೇಬಿ ಶಿವಾನಿ ದೇಸಾಯಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

Please Wait while comments are loading...