»   »  ಶುಭಾ, ವಿಜಯ್ ಯಶಸ್ವಿ ಜೋಡಿಯ ತಾಕತ್ತು

ಶುಭಾ, ವಿಜಯ್ ಯಶಸ್ವಿ ಜೋಡಿಯ ತಾಕತ್ತು

Posted By:
Subscribe to Filmibeat Kannada
A Still from Slum Bala
'ಚಂಡ', 'ಸ್ಲಂ ಬಾಲ' ಚಿತ್ರಗಳ ನಂತರ ನಟ ವಿಜಯ್ ಮತ್ತು ಶುಭಾ ಪುಂಜ ಯಶಸ್ವಿ ಜೋಡಿ 'ತಾಕತ್ತು' ಚಿತ್ರದ ಮೂಲಕ ಮತ್ತೆ ಹಿಂತಿರುಗುತ್ತಿದೆ. ಬಿಡುಗಡೆಗೂ ಮುನ್ನವೇ ಕನ್ನಡಚಿತ್ರೋದ್ಯಮದಲ್ಲಿ ತಾಕತ್ತು ಬಹಳಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಬಗ್ಗೆ ಮಾತನಾಡಿದ ಶುಭಾ ಪೂಂಜಾ, ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಪಕ್ಕಾ ಪ್ರೇಮಕಥಾ ಚಿತ್ರವಿದು. ನನ್ನುದು ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರ. ಎಂ ಎಸ್ ರಮೇಶ್ ರಂತಹ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಾಗುತ್ತಿದೆ ಎಂದರು.

ತಾಕತ್ತು ಚಿತ್ರದ ಧ್ವನಿಸುರುಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಜಾನಪದ ಹಾಗೂ ಸಾಂಸ್ಕೃತಿಕ ಟ್ಯೂನ್ ಗಳಿಗೆ ಪ್ರಾಮುಖ್ಯತೆ ನೀಡಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಶುಭಾ. ಬಸ್ಸಿನಲ್ಲಿ ಚಿತ್ರೀಕರಿಸಿರುವ ಹಾಡು ಕಿವಿಗಳಿಗೆ ಇಂಪಾಗಿದೆ. ಹಾಗೆಯೇ ಚಿತ್ರದಲ್ಲಿ ಒಂದು ಆಧುನಿಕ ಹಾಡೂ ಸಹ ಇದೆ. ಶುಭ ಪುಂಜ ನಟಿಸಿದ 'ಚಂಡ' ಜಯಭೇರಿ ಬಾರಿಸಿತ್ತು. ನಂತರ ಬಂದ ವಿಜಯ್ ರೊಂದಿಗಿನ 'ಅಂಜದಿರು' ಚಿತ್ರ ಬಾಕ್ಸಾಫೀಸಲ್ಲಿ ಸೋತಿತ್ತು.

'ಚಂಡ' ಚಿತ್ರದ ದಾಖಲೆಯನ್ನು ತಾಕತ್ತು ಮುರಿಯಲಿದೆ ಎಂಬ ವಿಶ್ವಾಸವನ್ನು ಶುಭಾ ಪುಂಜ ವ್ಯಕ್ತಪಡಿಸಿದರು. ಗಂಭೀರ ಪಾತ್ರಗಳಿಂದ ಕೊಂಚ ಬಿಡುವು ತೆಗೆದುಕೊಂಡು ಕಾಮಿಡಿ ಪಾತ್ರಗಳ ಕಡೆಗೆ ಶುಭಾ ಒಲವು ತೋರಿಸಿದ್ದಾರೆ. ಗೋಲ್ ಮಾಲ್ ಎಂಬ ಸಂಪೂರ್ಣ ಹಾಸ್ಯ ಪ್ರಧಾನಚಿತ್ರದಲ್ಲಿ ನಟಿಸುತ್ತಿದ್ದು, ಇದು ಹಿಂದಿ ಚಿತ್ರದ ರೀಮೇಕ್ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಮೋದ್ ಚಕ್ರವರ್ತಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರಸ್ತತ ಕುಶಾಲ ನಗರದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada