»   » ಕನ್ನಡ ತಾರೆಯರ ಹೊಸ ವರ್ಷದ ರೆಸಲ್ಯೂಷನ್ ಏನು?

ಕನ್ನಡ ತಾರೆಯರ ಹೊಸ ವರ್ಷದ ರೆಸಲ್ಯೂಷನ್ ಏನು?

Posted By:
Subscribe to Filmibeat Kannada

ಮತ್ತೆ ಬಂದಿದೆ ಹೊಸ ವರ್ಷ...ಹೊಸ ಹರ್ಷ. ಕಣ್ಮುಚ್ಚಿ ಕಣ್ತೆರೆಯುವುದರೊಳಗೆ 2014 ಕಳೆದೇ ಹೋಯ್ತು. 2015 ವೆಲ್ ಕಮ್ ಮಾಡುವ ಕಾಲ ಬಂದೇ ಬಿಡ್ತು. ಹೊಸ ವರ್ಷವನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳುವುದಕ್ಕೆ ಇಡೀ ವಿಶ್ವ ಸಜ್ಜಾಗುತ್ತಿದೆ.

ಹೊಸ ವರ್ಷದ ಸಡಗರದೊಂದಿಗೆ, ಹೊಸ ರೆಸಲ್ಯೂಷನ್ ತೆಗೆದುಕೊಳ್ಳುವುದು ಸಾಮಾನ್ಯ. ನ್ಯೂ ಇಯರ್ ರೆಸಲ್ಯೂಷನ್ ತೆಗೆದುಕೊಂಡು ಇಡೀ ವರ್ಷ ಅದನ್ನ ಪಾಲಿಸುವುದು ಕೆಲವರಿಗೆ ಅಭ್ಯಾಸ. ಆದ್ರೆ, ಸದಾ ಶೂಟಿಂಗ್ ಅಂತ ಬಣ್ಣದ ಪ್ರಪಂಚದಲ್ಲೇ ಇರುವ ಸೆಲೆಬ್ರಿಟಿಗಳು ರೆಸಲ್ಯೂಷನ್ ಮಾಡ್ತಾರಾ? [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ? ]

ಮಾಡೋಹಾಗಿದ್ರೆ, ಯಾವ್ಯಾವ ಸೆಲೆಬ್ರಿಟಿಗಳು 2015ಕ್ಕೆ ಏನೇನ್ ರೆಸಲ್ಯೂಷನ್ ತೆಗೆದುಕೊಳ್ತಾರೆ? ಈ ಕುತೂಹಲದಿಂದ 'ಫಿಲ್ಮಿಬೀಟ್ ಕನ್ನಡ' ಕೆಲ ಸೆಲೆಬ್ರಿಟಿಗಳನ್ನು ಕೇಳಿದಾಗ, ಸಿಕ್ಕಿರುವ ರೆಸಲ್ಯೂಷನ್ ಗಳ ಪಟ್ಟಿ ಇಲ್ಲಿದೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ರಾಗಿಣಿ
  

ರಾಗಿಣಿ

''ರೆಸಲ್ಯೂಷನ್ ಅಂತೇನಿಲ್ಲ. ಒಳ್ಳೇ ಸಿನಿಮಾಗಳನ್ನ ಮಾಡ್ಬೇಕು. ಅಭಿಮಾನಿಗಳಿಗೆ ಮನರಂಜನೆ ನೀಡ್ಬೇಕು. ಕಳೆದ ವರ್ಷಕ್ಕಿಂತ 2015 ರಲ್ಲಿ ತುಂಬಾ ಹಿಟ್ಸ್ ಕೊಡ್ಬೇಕು ಅಂದುಕೊಂಡಿದ್ದೀನಿ''- ರಾಗಿಣಿ

ರಾಧಿಕಾ ಪಂಡಿತ್
  

ರಾಧಿಕಾ ಪಂಡಿತ್

''ನನಗೆ ಸಿನಿಮಾ ಬಿಟ್ಟು ಬೇರೇನೂ ಆಸೆ ಇಲ್ಲ. ಒಳ್ಳೆ ಸಿನಿಮಾಗಳು ಮಾಡಬೇಕು ಅನ್ನೋದೇ ನನ್ನ ರೆಸಲ್ಯೂಷನ್'' - ರಾಧಿಕಾ ಪಂಡಿತ್.

ರಮೇಶ್ ಅರವಿಂದ್
  

ರಮೇಶ್ ಅರವಿಂದ್

''2014 ನಂಗೆ ತುಂಬಾ ಒಳ್ಳೆಯ ವರ್ಷ. 'ವೀಕೆಂಡ್ ವಿತ್ ರಮೇಶ್' ಹಿಟ್ ಆಯ್ತು. ಆ ತರಹ ಮತ್ತೊಂದು ಶೋ ಮಾಡ್ಬೇಕು. 2015 ರಲ್ಲಿ 'ಉತ್ತಮ ವಿಲನ್' ರಿಲೀಸ್ ಆಗಲಿದೆ. ಮತ್ತಷ್ಟು ಒಳ್ಳೇ ಸಿನಿಮಾಗಳನ್ನ ಮಾಡ್ಬೇಕು. ಪಾಸಿಟೀವ್ ಆಗಿ ಇರಬೇಕು ಅನ್ನೋದೇ ನನ್ನ ರೆಸಲ್ಯೂಷನ್''- ರಮೇಶ್ ಅರವಿಂದ್

ಚಾಂದಿನಿ
  

ಚಾಂದಿನಿ

''2015 ಕ್ಕೆ ನಾನು ಎರಡು ರೆಸಲ್ಯೂಷನ್ ತೆಗೆದುಕೊಳ್ಳುತ್ತೀನಿ. ಒಂದು ನನ್ನ ವೈಯುಕ್ತಿಕ ಬದುಕಿಗೆ. ಮತ್ತೊಂದು ನನ್ನ ವೃತ್ತಿ ಬದುಕಿಗೆ. ವೈಯುಕ್ತಿಕ ಬದುಕ್ಕಲ್ಲಿ ನಾನು ಬೇರೆಯವರಿಗೆ ಸಹಾಯ ಹಸ್ತ ಚಾಚಿ, ಇತರರ ಮೊಗದಲ್ಲಿ ಹರ್ಷವನ್ನ ತರಿಸಬೇಕು. ವೃತ್ತಿ ಬದುಕ್ಕಲ್ಲಿ ನಾನು ಇನ್ನಷ್ಟು ಡೆಡಿಕೇಟ್ ಆಗ್ಬೇಕು. ಇನ್ನೂ ಹೆಚ್ಚು ಆಕ್ಟೀವ್ ಆಗ್ಬೇಕು. ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಅನ್ನುವುದೇ ನನ್ನ ರೆಸಲ್ಯೂಷನ್'' - ಚಾಂದಿನಿ

ಶ್ವೇತಾ ಶ್ರೀವಾತ್ಸವ್
  

ಶ್ವೇತಾ ಶ್ರೀವಾತ್ಸವ್

''ಇಲ್ಲಿವರೆಗೂ ವರ್ಷಕ್ಕೆ ಒಂದೇ ಸಿನಿಮಾ ಮಾಡ್ತಿದ್ದೆ. 2015 ರಲ್ಲಿ ಜಾಸ್ತಿ ಸಿನಿಮಾ ಮಾಡ್ಬೇಕು ಅನ್ನೋದೇ ನನ್ನ ರೆಸಲ್ಯೂಷನ್. ಬಿಗ್ ಹಿಟ್ ಕೊಡಬೇಕು ಅನ್ನುವ ಆಸೆ ಇದೆ. ನನ್ನ ನಿರ್ದೇಶನದ ಸಿನಿಮಾಗೂ 2015 ರಲ್ಲಿ ಚಾಲನೆ ಕೊಡಬೇಕು ಅಂದುಕೊಂಡಿದ್ದೀನಿ''- ಶ್ವೇತಾ ಶ್ರೀವಾತ್ಸವ್

ಹರ್ಷಿಕಾ ಪೂಣಚ್ಚ
  

ಹರ್ಷಿಕಾ ಪೂಣಚ್ಚ

''ನಾನು ತುಂಬಾ ಫ್ರೈಡ್ ಫುಡ್ ತಿಂತೀನಿ. ಅದನ್ನ 2015 ರಲ್ಲಿ ಕಮ್ಮಿ ಮಾಡಿ. ಸ್ವಲ್ಪ ಡಯೆಟ್ ಮಾಡ್ಬೇಕು ಅಂತಿದ್ದೀನಿ. ಹೀರೋಯಿನ್ ಆದವರು ಡಯೆಟ್ ಮಾಡಲೇಬೇಕು. ಸೋ, 2015 ರಲ್ಲಿ ನಾನು ಸ್ಟ್ರಿಕ್ಟ್ ಆಗಿ ಡಯೆಟ್ ಮಾಡ್ಬೇಕು ಅಂತ ರೆಸಲ್ಯೂಷನ್ ಮಾಡ್ತೀನಿ'' - ಹರ್ಷಿಕಾ ಪೂಣಚ್ಚ

ಸಿಂಧು ಲೋಕನಾಥ್
  

ಸಿಂಧು ಲೋಕನಾಥ್

''ರೆಸಲ್ಯೂಷನ್ ಬಗ್ಗೆ ನನಗೆ ನಂಬಿಕೆ ಇಲ್ಲ. ಬರೀ ಹೊಸ ವರ್ಷದ ದಿನ ಅದನ್ನ ಮಾಡೋದಲ್ಲ. ಪ್ರತಿ ದಿನ ಮಾಡ್ಬೇಕು. ಮಿಸ್ ಮಾಡಬಾರದು. ಅದು ನನ್ನ ಕೈಲಿ ಆಗಲ್ಲ. ಹೀಗಾಗಿ ನಾನು ಯಾವುದೇ ರೆಸಲ್ಯೂಷನ್ ಮಾಡಲ್ಲ''- ಸಿಂಧು ಲೋಕನಾಥ್

ಶುಭಾ ಪೂಂಜಾ
  

ಶುಭಾ ಪೂಂಜಾ

''2015 ರಲ್ಲಿ ಒಂದು ಸೂಪರ್ ಹಿಟ್ ಸಿನಿಮಾ ಕೊಡ್ಬೇಕು ಅನ್ನುವುದೇ ನನ್ನ ರೆಸಲ್ಯೂಷನ್'' - ಶುಭಾ ಪೂಂಜಾ.

English summary
Here comes the time to welcome 2015 and so to make New Year Resolutions. Sandalwood Celebrities have revealed their New Year Resolutions. Take a look at this report.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada