For Quick Alerts
ALLOW NOTIFICATIONS  
For Daily Alerts

ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ರವಾನೆ

By Rajendra
|
<ul id="pagination-digg"><li class="next"><a href="/news/21-actor-darshan-khaidi-number-8993-aid0052.html">Next »</a></li></ul>

ಪತ್ನಿ ಮತ್ತು ಮಗನ ಮೇಲೆ ಹಲ್ಲೆ ಮಾಡಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್‌ರನ್ನು ಬುಧವಾರ (ಸೆ.21) ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಯಿತು. ಬಳಿಕ ದರ್ಶನ್‌ರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಯಿತು.

ಐವತ್ತಕ್ಕೂ ಹೆಚ್ಚು ಪೊಲೀಸ್ ಭದ್ರತಾ ಸಿಬ್ಬಂದಿ, ಓರ್ವ ಎಸಿಪಿ ಹಾಗೂ ಮೂವರು ಇನ್ಸ್‌ಪೆಕ್ಟರ್‌ಗಳ ತಂಡ ದರ್ಶನ್‌ರನ್ನು ಆಸ್ಪತ್ರೆಯಿಂದ ಜೈಲಿಗೆ ಕರೆದೊಯ್ಯಿತು. ಸಶಸ್ತ್ರ ಪಡೆಯ ಆಂಬುಲೆನ್ಸ್‌ನಲ್ಲಿ ದರ್ಶನ್‌ರನ್ನು ರವಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ ಬುಗ್ಗಿ ಮಾತನಾಡುತ್ತಾ, ದರ್ಶನ್ ಅವರು ತಮ್ಮ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಇಷ್ಟು ದಿನಗಳಲ್ಲಿ ಅವರು ಎಂದೂ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಆಸ್ಪತ್ರೆ ಸಿಬ್ಬಂದಿ, ನರ್ಸ್‌ಗಳೊಂದಿಗೆ ಅವರು ಸೌಜನ್ಯದಿಂದ ವರ್ತಿಸುತ್ತಿದ್ದರು.

ನಮಗೆಲ್ಲಾ ಅಚ್ಚರಿಯಾಗುವಂತೆ ಅವರು ನಡೆದುಕೊಂಡರು. ಇವರೇನಾ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಎಂಬ ಅನುಮಾನ ನಮ್ಮನ್ನು ಕಾಡಿತು ಎಂದು ಕೊಂಚ ಭಾವುಕರಾಗಿ ಡಾ.ಬುಗ್ಗಿ ಮಾತನಾಡಿದರು. ತಮ್ಮನ್ನು ಇಷ್ಟು ದಿನ ಆರೈಕೆ ಮಾಡಿದ ಆಸ್ಪತ್ರೆ ಸಿಬ್ಬಂದಿಗೆ ದರ್ಶನ್ ಕೃತಜ್ಞತೆ ತಿಳಿಸಿದ್ದಾಗಿ ಅವರು ವಿವರ ನೀಡಿದರು.

<ul id="pagination-digg"><li class="next"><a href="/news/21-actor-darshan-khaidi-number-8993-aid0052.html">Next »</a></li></ul>

English summary
Kannada actor Darshan shifted to Parappana Agrahara central jail after he discharged from Rajiv Gandhi Institute of Chest Diseases (RGICD) on 21nd Wednesday. He is allotted D block cell along with Katta Jagadish, who is involved in in the multi-crore Karnataka Industrial Areas Development Board (KIADB) scam case.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more