»   » ಬಾಲಿವುಡ್‌ಗೆ ಪಂಚರಂಗಿ ಬೆಡಗಿ ನಿಧಿಸುಬ್ಬಯ್ಯ

ಬಾಲಿವುಡ್‌ಗೆ ಪಂಚರಂಗಿ ಬೆಡಗಿ ನಿಧಿಸುಬ್ಬಯ್ಯ

Posted By:
Subscribe to Filmibeat Kannada

ಒಂದು ಬ್ರೇಕ್‌ಗಾಗಿ ಜಾತಕಪಕ್ಷಿಯಂತೆ ಎದುರು ನೋಡುತ್ತಿದ್ದ ಕನ್ನಡದ 'ಪಂಚರಂಗಿ' ನಿಧಿ ಸುಬ್ಬಯ್ಯಗೆ ಹಿಂದಿಯಲ್ಲಿ ಭರ್ಜರಿ ಆಫರ್ ಸಿಕ್ಕಿದೆ. ಮಣಿಶಂಕರ್ ನಿರ್ದೇಶನದ ಈ ಚಿತ್ರದ ನಾಯಕ ನಟ ದಿಗಂತ್. ಈ ಮೂಲಕ ಪಂಚರಂಗಿ ಜೋಡಿ ಹಿಂದಿಗೂ ಅಡಿಯಿಟ್ಟಿದೆ.

ಈ ಹಿಂದೆ ಮಣಿಶಂಕರ್ ಚಿತ್ರಕ್ಕೆ ಪ್ರಚಿ ದೇಸಾಯಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಪ್ರಾಚಿ ಆ ಪಾತ್ರವನ್ನು ಒಲ್ಲೆ ಎಂದಿದ್ದರು. ಈಗ ಆ ಚಾನ್ಸ್ ನಿಧಿ ಸುಬ್ಬಯ್ಯ ಪಾಲಾಗಿದೆ. ಪಂಚರಂಗಿ ಚಿತ್ರ ನೋಡಿದ ಮಣಿಶಂಕರ್‌ಗೆ ಇವರಿಬ್ಬರ ಕೆಮಿಸ್ಟ್ರಿ ಇಷ್ಟವಾಯಿತಂತೆ. ಇನ್ನೂ ಹೆಸರಿಡದ ಈ ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ.

ಆಪ್ತವಲಯದಲ್ಲಿ ಧೂದ್ ಪೇಡ ಎಂದೇ ಗುರುತಿಸಿಕೊಂಡಿರುವ ದಿಗಂತ್‌ಗೆ ಬಾಲಿವುಡ್‌ ಅದೃಷ್ಟದ ಬಾಗಿಲು ತೆರೆದಿರುವುದು ಅವರ ಸಂತಸವನ್ನು ಇಮ್ಮಡಿಸಿದೆ. ಇನ್ನು ನಿಧಿಗೆ 'ಪಂಚರಂಗಿ' ಹಾಗೂ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಬಳಿಕ ಅವಕಾಶಗಳು ಗಗನಕುಸುಮವಾಗಿವೆ. ಈಗ ಬಾಲಿವುಡ್‌ ಬಾಗಿಲು ತೆರೆದು ಸ್ವಾಗತಿಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Kannada actress cum model Nidhi Subbaiah who had acted with Diganth in Kannada hit Pancharangi has now been selected to play the heroine in Hindi film to be directed by Manishankar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada