For Quick Alerts
  ALLOW NOTIFICATIONS  
  For Daily Alerts

  ಮಾ.20ಕ್ಕೆ ಕೋರ್ಟ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್

  By Super
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮಾರ್ಚ್ 20ರಂದು ವಿಚಾರಣೆ ಸಲುವಾಗಿ ಮತ್ತೆ ಹೈಕೋರ್ಟ್‌ಗೆ ಹಾಜರಾಗಬೇಕಿದೆ. ಈ ಹಿಂದೆ ದರ್ಶನ್ ಮೇಲೆ ಅವರ ಪತ್ನಿ ವಿಜಯಲಕ್ಷ್ಮಿ ಹಲ್ಲೆ ಹಾಗೂ ಕಿರುಕುಳ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣ ಇಡೀ ದೇಶದ ಗಮನಸೆಳೆದಿತ್ತು. ಬಳಿಕ ಎಲ್ಲವೂ ತಣ್ಣಗಾಗಿತ್ತು.

  ಘಟನೆ ನಡೆದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ಪೊಲೀಸರಿಗೂ ದೂರು ನೀಡಿದ್ದರು. ಬಳಿಕ ಕೋರ್ಟ್‌ನಲ್ಲಿ ಆ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಲ ದರ್ಶನ್‌ಗೆ ಜಾಮೀನು ನಿರಾಕರಿಸಿತ್ತು. ಬಳಿಕ ಅವರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

  ದರ್ಶನ್‌ಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಜನವರಿ 20ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ದರ್ಶನ್ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಾರಣ ವಿನಾಯಿತಿ ಕೋರಿದ್ದರು. ಈಗ ಮತ್ತೆ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆಗಳಿವೆ.

  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಚಾರ್ಚ್ ಶೀಟ್ ದಾಖಲಿಸಿಲ್ಲ. ಮಾರ್ಚ್ 20ರಂದು ಕೋರ್ಟ್‌ಗೆ ದರ್ಶನ್ ಮತ್ತೆ ಹಾಜರಾಗಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಈಗ ಹಳೆಯದೆಲ್ಲವನ್ನೂ ಮರೆತು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆ ಹಾಯಾಗಿ ಸಂಸಾರ ನಡೆಸುತ್ತಿರುವುದು ಗೊತ್ತೇ ಇದೆ. (ಏಜೆನ್ಸೀಸ್)

  English summary
  The sourcess says that Kannada actor Challenging Star Darshan to attend court on March 20th. Earlier the Karnataka High Court had given a bail to Darshan and had ordered him to appear before court on January 20 along with his wife. Darshan had sought exemption from court because of his shooing schedule

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X