»   »  ಮಾನಸಿಕ ತೊಳಲಾಟಗಳ ಕತೆಯೇ ಅರುಂಧತಿ

ಮಾನಸಿಕ ತೊಳಲಾಟಗಳ ಕತೆಯೇ ಅರುಂಧತಿ

Subscribe to Filmibeat Kannada
Duniya Rashmi
ಸೆಲ್ಯುಲಾಯ್ಡ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಪ್ರೇಮ ಕಥಾ ಹಂದರ ಹೊಂದಿದ ಮೈ ಗ್ರೀಟಿಂಗ್ಸ್ ಈಗಾಗಲೇ ತೆರೆಗೆ ಸಿದ್ಧವಾಗಿದ್ದು ಈ ಸಂಸ್ಥೆಯ ಎರಡನೇ ಕಾಣಿಕೆಯಾಗಿ ವಿಭಿನ್ನ ಕುತೂಹಲಕಾರಿ ಕಥೆಯನ್ನು ಹೊಂದಿರುವ ಅರುಂಧತಿ ಚಿತ್ರ ನಿರ್ಮಾಣವಾಗುತ್ತಿದೆ.

ಬಿ.ಆರ್.ಕೇಶವ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ 22 ದಿನಗಳಲ್ಲಿ ಸಂಪೂರ್ಣವಾಗಿದ್ದು ಸದ್ಯ ಎಡಿಟಿಂಗ್ ಕಾರ್ಯ ನಡೆಯುತ್ತಿದೆ. ದುನಿಯಾ ಚಿತ್ರದಲ್ಲಿ ಗಮನಾರ್ಹ ಅಭಿನಯ ನೀಡಿದ ರಶ್ಮಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಮಾನಸಿಕ ಒತ್ತಡಗಳಿಂದ ಬಳಲುತ್ತಿರುವ ಯುವತಿಯೋರ್ವಳ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವೇ ಪ್ರಧಾನವಾಗಿದ್ದು ಅದನ್ನು ನಿರೂಪಿಸುವಲ್ಲಿ ನಿರ್ದೇಶಕ ಕೇಶವ, ಸಾಕಷ್ಷು ಶ್ರಮ ವಹಿಸಿದ್ದಾರೆ. ಗೌರಿವೆಂಕಟೇಶ್ ರವರ ಛಾಯಾಗ್ರಹಣ, ಎಂ.ಎಸ್.ಮಾರುತಿ ಅವರ ಸಂಗೀತ, ಮೋಹನ್ ಜುನೇಜಾ ಅವರ ಸಂಭಾಷಣೆ ಈ ಚಿತ್ರಕ್ಕಿದ್ದು ನಾಯಕನಾಗಿ ಮಹೇಶ್ ಗಾಂಧಿ, ಬ್ಯಾಂಕ್ ಜನಾರ್ಧನ್, ಸ್ವಸ್ತಿಕ್ ಶಂಕರ್, ಜಯಲಕ್ಷ್ಮಿ, ವಿಕ್ರಂ ಉದಯ್‌ಕುಮಾರ್, ಮೋಹನ್ ಜುನೇಜಾ ಚಂದ್ರಕಲಾ ಮೋಹನ್ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಲ್ಲಿ ಅರುಂಧತಿ
ಅರುಂಧತಿ ಎಂಬ ಹೊಸ ಚಿತ್ರದಲ್ಲಿ ದುನಿಯಾ ರಶ್ಮಿ
ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ
ಸೆನ್ಸಾರ್ ಮಂದಾಕಿನಿಗೆ ಬಿಸಿ ಮುಟ್ಟಿಸಿದ್ದು ಯಾಕೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada