»   » ಆಸ್ಕರ್ ಅಂಗಳದಲ್ಲಿ ಫಾಲ್ಕೆ ಕುರಿತ ಮರಾಠಿ ಚಿತ್ರ

ಆಸ್ಕರ್ ಅಂಗಳದಲ್ಲಿ ಫಾಲ್ಕೆ ಕುರಿತ ಮರಾಠಿ ಚಿತ್ರ

Posted By: Super
Subscribe to Filmibeat Kannada
Harishchandrachi factory' India's entry for Oscars
ಮರಾಠಿ ಚಲನಚಿತ್ರ 'ಹರಿಶ್ಚಂದ್ರಾಚಿ ಫ್ಯಾಕ್ಟ್ರಿ' ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದ ಸ್ಪರ್ಧಾಕಣಕ್ಕೆ ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ.

ಭಾರತ ಸಿನಿಮಾ ಜಗತ್ತಿನ ಪಿತಾಮಹ ಎಂದೇ ಖ್ಯಾತರಾದ ದುಂಡಿರಾಜ್ ಗೋವಿಂದ್ ಫಾಲ್ಕೆ (ದಾದಾಸಾಹೇಬ್ ಫಾಲ್ಕೆ ) ಅವರು 1913 ರಲ್ಲಿ ಭಾರತದ ಪ್ರಪ್ರಥಮ ಚಲನಚಿತ್ರ'ರಾಜಾ ಹರಿಶ್ಚಂದ್ರ' ಚಿತ್ರ ನಿರ್ಮಾಣಕ್ಕೆ ಪಟ್ಟ ಪಾಡನ್ನು 2 ಗಂಟೆಗಳಲ್ಲಿ ತೋರಿಸುವ ಪ್ರಯತ್ನವನ್ನು ರಂಗಭೂಮಿ ನಟ, ನಿರ್ದೇಶಕ ಪರೇಶ್ ಮೊಕಾಶಿ ಮಾಡಿದ್ದಾರೆ. ಸ್ಪರ್ಧಾಕಣದಲ್ಲಿದ್ದ ನ್ಯೂಯಾರ್ಕ್, ಡಿಲ್ಲಿ6 ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳನ್ನು ಹಿಂದಕ್ಕೆ ತಳ್ಳಿ, 'ಹರಿಶ್ಚಂದ್ರಾಚಿ ಫ್ಯಾಕ್ಟ್ರಿ' ಪ್ರಶಸ್ತಿ ಸುತ್ತಿಗೆ ಆಯ್ಕೆಗೊಂಡಿದೆ. ಪರೇಶ ಮೊಕಾಶಿ ಅವರ ನಿರ್ದೇಶನದ ಪ್ರಥಮಚಿತ್ರ ಇದಾಗಿದೆ. ಕಡಿಮೆ ಬಜೆಟ್ಟಿನಲ್ಲಿ ತಯಾರಾದ ಈ ಚಿತ್ರ, ಈಗಾಗಲೇ ಅಂತಾರಾಷ್ಟ್ರೀಯ ಪ್ರಶಸ್ತಿ, ಗೌರವಗಳನ್ನು ಪಡೆದಿದೆ.

ಕಾಕತಾಳೀಯ ಎಂಬಂತೆ, ಫಾಲ್ಕೆ ಅವರಂತೆ ಮೊಕಾಶಿಗೂ ಕೂಡ ಆರ್ಥಿಕ ಹೊಡೆತ ತಟ್ಟಿದ್ದು, ಅಂದು ರಾಜಾ ಹರಿಶ್ಚಂದ್ರ ಚಿತ್ರ ನಿರ್ಮಿಸಲು ಫಾಲ್ಕೆ ಅವರು ತಮ್ಮ ಮನೆ ಭೋಗ್ಯಕ್ಕೆ ಕೊಟ್ಟಿದ್ದರು. ಇಂದು , ಮೊಕಾಶಿ ಅವರು ಹರಿಶ್ಚಂದ್ರಾಚಿ ಫ್ಯಾಕ್ಟ್ರಿ ತೆರೆಗೆ ತರಲು ತಮ್ಮ ಅಸ್ತಿ ಮಾರಾಟ ಮಾಡಬೇಕಾಯಿತು. ನಂದು ಮಾಧವ್ ಮುಖ್ಯಭೂಮಿಕೆಯಲ್ಲಿರುವ ಈ ಮರಾಠಿ ಚಿತ್ರ ನೋವಿನಲ್ಲೂ ನಲಿವನ್ನು ಕಾಣುವ ಕಥಾಹಂದರ ಹೊಂದಿದೆ. ಡಿಸೆಂಬರ್ ವೇಳೆಗೆ ಚಿತ್ರ ಭಾರತದಲ್ಲಿ ತೆರೆಕಾಣಬಹುದು. ಚಿತ್ರದ ಪ್ರಚಾರಕ್ಕೆ ಅಮೀರ್ ಖಾನ್, ಅಶಿತೋಷ್ ಗೌವಾರಿಕರ್ ಹಾಗೂ ನಿರ್ದೇಶಕ ಸಂದೀಪ್ ಸಾವಂತ್ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದೆ ಸಮಯ ಸಿಕ್ಕರೆ ಹರಿಶ್ಚಂದ್ರಾಚಿ ಫ್ಯಾಕ್ಟ್ರಿ ಚಿತ್ರ ನಿರ್ಮಾಣದ ಹಿಂದಿನ ಕಥೆಯನ್ನು ಬರೆಯುವುದಾಗಿ ಮೊಕಾಶಿ ಹೇಳುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

English summary
ಮರಾಠಿ ಚಲನಚಿತ್ರ 'ಹರಿಶ್ಚಂದ್ರಾಚಿ ಫ್ಯಾಕ್ಟ್ರಿ' ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದ ಸ್ಪರ್ಧಾಕಣಕ್ಕೆ ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ.ಭಾರತ ಸಿನಿಮಾ ಜಗತ್ತಿನ ಪಿತಾಮಹ ಎಂದೇ ಖ್ಯಾತರಾದ ದುಂಡಿರಾಜ್ ಗೋವಿಂದ್ ಫಾಲ್ಕೆ (ದಾದಾಸಾಹೇಬ್ ಫಾಲ್ಕೆ ) ಅವರು 1913 ರಲ್ಲಿ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X