»   » ಅಭಿನಯ ಶಾರದೆ ಜಯಂತಿ ಸಕತ್ ಹಾಟ್

ಅಭಿನಯ ಶಾರದೆ ಜಯಂತಿ ಸಕತ್ ಹಾಟ್

Posted By: * ಮಹೇಶ್ ಮಲ್ನಾಡ್
Subscribe to Filmibeat Kannada

75 ವರ್ಷ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಸಕತ್ ಹಾಟ್ ಹಾಗೂ ಗ್ಲಾಮರಸ್ ನಟಿ ಯಾರು ಎಂಬ ಸಮೀಕ್ಷೆಗೆ ಉತ್ತರ ಸಿಕ್ಕಿದೆ. ರೇಡಿಯೋ ಮಿರ್ಚಿ 98.3 ನಡೆಸಿದ ಸಮೀಕ್ಷೆಯಲ್ಲಿ ಶೇ. 99 ರಷ್ಟು ಶೋತೃಗಳು ಅಭಿನಯ ಶಾರದೆ ಜಯಂತಿ ಅವರನ್ನು "ಸ್ಯಾಂಡಲ್ ವುಡ್ ನ ಹಾಟೆಸ್ಟ್ ನಟಿ" ಎಂದು ಆಯ್ಕೆ ಮಾಡಿದ್ದಾರೆ.

ಫಲಿತಾಂಶ ಬಗ್ಗೆ ತಿಳಿದ ಜಯಂತಿ, ಅತ್ಯಾಶ್ಚರ್ಯದಿಂದ ಇದು ನಿಜನಾ! ಎಂದು ಉದ್ಗರಿಸಿದ್ದಾರೆ. ತಮ್ಮ ಪರ ವೋಟ್ ಮಾಡಿ ಎಲ್ಲಾ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆರ್ ಜೆ ಪಲ್ಲವಿ ನಡೆಸಿಕೊಡುವ ರಿವೈಂಡ್ ರಾಗ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಜಯಂತಿ ಅವರು ಇನ್ನೊಂದು ಪರ್ಸೆಂಟ್ ಹೇಗೆ ಮಿಸ್ ಆಯ್ತು ಅಂಥಾ ಕೇಳಿದರು.

ಹಳೆ ನೆನಪುಗಳನ್ನು ಕೆದಕಿದ 'ರಿವೈಂಡ್ ರಾಗ' ಕಾರ್ಯಕ್ರಮದಲ್ಲಿ ಜಯಂತಿ ಅವರ ಯೌವನದ ದಿನಗಳಲ್ಲಿ ತೆರೆಕಂಡ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತಾ ಬಂದಿರುವ ಮಹಾನ್ ಅಭಿಮಾನಿಯಾದ ಒಬ್ಬ ಹಿರಿಯ ಶೋತೃಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. 'ನಾನು ನನ್ನ ಗೆಳೆಯರು ಜಯಂತಿ ಅವರ ಚಿತ್ರಗಳನ್ನು ಮಿಸ್ ಮಾಡಿಕೊಂಡಿದ್ದೆ ಇಲ್ಲಾ. ನಮ್ಮ ಹಾಸ್ಟೆಲ್ ರೂಂ ತುಂಬಾ ಜಯಂತಿ ಅವರ ದೊಡ್ಡ ಪೋಸ್ಟರ್ ಗಳಿರುತ್ತಿತ್ತು. ವಾರ್ಡನ್ ಕಣ್ತಪ್ಪಿಸಿ, ಗೋಡೆಗಳಿಗೆ ಜಯಂತಿ ಅವರ ಫೋಟೊಗಳನ್ನು ಹಾಕಿ ಆನಂದ ಪಡುವುದು ಒಂದು ರೀತಿ ಸವಾಲಾಗಿತ್ತು. ಆದ್ರೂ ಒಳ್ಳೆ ಮಜಾ ಇತ್ತು' ಎಂದು ಹೇಳಿದರು.

ಮತ್ತೆ ಕೆಲವು ಮಹಿಳಾ ಶೋತೃಗಳು ಎಡಕಲ್ಲು ಗುಡ್ಡದ ಮೇಲೆ, ಬಹದ್ದೂರ್ ಗಂಡು ಚಿತ್ರಗಳಲ್ಲಿನ ಜಯಂತಿ ಅವರ ಬೋಲ್ಡ್ ಪಾತ್ರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಭಿಮಾನಿಗಳ ಹಾರೈಕೆ, ಪ್ರೀತಿಯಿಂದ ನಾಚಿ ಕೆಂಪಾದ 'ಮಿಸ್ ಲೀಲಾವತಿ' ಜಯಂತಿ ಅವರು ಹರ್ಷಚಿತ್ತರಾಗಿ ಕಾರ್ಯಕ್ರಮವನ್ನು ಪರಿಸಮಾಪ್ತಿಗೊಳಿಸಿದರು.

"ನಾನು ನನ್ನನ್ನು ಹೆಚ್ಚು ಪ್ರೀತಿಸುತ್ತೇನೆ. ಸದಾ ಮುಗುಳ್ನಗೆಯನ್ನು ಹೊರಸೂಸುವುದು ಬಹಳ ಮುಖ್ಯ. ಸುಂದರವಾಗಿ ಕಾಣುವುದು ಕಷ್ಟವೇನಲ್ಲ. ಸದಾ ಲವಲವಿಕೆಯಿಂದ ಇರಬೇಕು. ಯಾರೊಡನೆಯೂ ದ್ವೇಷ ಕಟ್ಟಿಕೊಳ್ಳಬಾರದು. ನಾವು ಒಳ್ಳೆಯರಾಗಿದ್ದರೆ ಇದ್ದರೆ ನಮಗೂ ಒಳ್ಳೆ ಜನರೆ ಸಿಗುತ್ತಾರೆ ಎಂದು ನಂಬಿದವಳು ನಾನು. ನಾವು ಮಾಡುವ ಕೆಲಸವನ್ನು ಪ್ರೀತಿಸುವುದು ಮುಖ್ಯ" ಎಂದು ಹಿರಿಯ ನಟಿ ಟಿಪ್ಸ್ ನೀಡಿದರು.

ರಿವೈಂಡ್ ರಾಗ: 80 ಹಾಗೂ 90 ರ ದಶಕ ಸುಮಧುರ ಗೀತೆಗಳಿಗೆ ಮೀಸಲಾದ ಈ ಕಾರ್ಯಕ್ರಮದ ಆರ್ ಜೆ ಪಲ್ಲವಿ. ಸಿನಿಮಾ ಸುತ್ತಿ ಬಳಸಿ ಎಂಬ ಸಿನಿಮಾ ಹೆಸರುಗಳ ಕುರಿತ ಆಟ, ಮನಸ್ಸಿಗೆ ನೆಮ್ಮದಿ, ತಲೆಗೆ ಸ್ವಲ್ಪ ಕೆಲ್ಸ ಎಂಬ ಥೀಮ್ ನೊಂದಿಗೆ ಸೋಮವಾರ ದಿಂದ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾನ್ಹ 2ರ ವರೆಗೆ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಇದಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada