ಪ್ಲೇ ಬಾಯ್‌ನಲ್ಲಿ ಯೌವನ ಸ್ಫುರಿಸಿದ ಮುಸ್ಲಿಂ ಚೆಲುವೆ!

By Rajendra

ಮುಸ್ಲಿಂ ರೂಪದರ್ಶಿಯೊಬ್ಬಳು ಪ್ಲೇ ಬಾಯ್ ನಿಯತಕಾಲಿಕೆಗಾಗಿ ತಮ್ಮ ಯೌವನವನ್ನು ಪ್ರದರ್ಶಿಸುವ ಮೂಲಕ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿಲಾ ಸಹಿನ್ ಎಂಬ ಇಪ್ಪತ್ತೈದರ ಪ್ರಾಯದ ಟರ್ಕಿಶ್ ಮೂಲದ ಜರ್ಮನ್ ಚೆಲುವೆ ತಮ್ಮ ಅಂಗಸೌಷ್ಟವವನ್ನು ಕಜುರಾಹೋ ಶಿಲ್ಪಗಳೂ ನಾಚುವಂತೆ ಜಗಜ್ಜಾಹೀರು ಪಡಿಸಿದ್ದಾರೆ. ಪ್ಲೇ ಬಾಯ್ ಮೇ ಸಂಚಿಕೆ ಆಕೆಯ ಹುಟ್ಟುಡುಗೆ ಚಿತ್ರಗಳನ್ನು ಹೊತ್ತು ತಂದಿದೆ.

ಪ್ಲೇ ಬಾಯ್ ನಿಯತಕಾಲಿಕೆಯ ಮುಖಪುಟದಲ್ಲೇ ತಮ್ಮ ಬಾಹ್ಯ ಸೌಂದರ್ಯವನ್ನು ಅನಾವರಣಗೊಳಿಸಿರುವ ಈಕೆ ಒಳಗೆ ಇನ್ನೇನು ಪ್ರದರ್ಶಿಸಿದ್ದಾರೋ ಎಂಬ ಕುತೂಹಲವನ್ನು ಕೆರಳಿಸಿದ್ದಾರೆ. ಈಕೆ ಯಾವುದೇ ಅಳುಕಿಲ್ಲದೆ ಬಟ್ಟೆ ಕಳಚಿರುವುದು ಮುಸ್ಲಿಂ ಮೂಲಭೂತವಾದಿಗಳ ಪಿತ್ತ ಕೆರಳಿಸಿದೆ. ಈ ಮೂಲಕ ಈಕೆಯ ನಗ್ನ ಚಿತ್ರಗಳು ವಿವಾದಕ್ಕೂ ಕಾರಣವಾಗಿವೆ.

" ಬಟ್ಟೆ ಕಳಚುವ ಮೂಲಕ ನನಗೆ ಬಿಡುಗಡೆ ಲಭಿಸಿದೆ. ಬಾಲ್ಯದಿಂದಲೂ ನನ್ನ ಮೇಲೆ ಬಹಳಷ್ಟು ನಿರ್ಬಂಧ ಹೇರಲಾಗಿತ್ತು. ಈಗ ಬಂಧಮುಕ್ತಳಾಗಿದ್ದೇನೆ ಎಂದು ಸಿಲಾ ಸಹಿನ್ ಪ್ರತಿಕ್ರಿಯಿಸಿದ್ದಾರೆ. ಯುವ ಟರ್ಕಿಶ್ ಮಹಿಳೆ ಸೌಂದರ್ಯ ಹೇಗಿರುತ್ತದೆ ಎಂಬುದನ್ನು ಪ್ರದರ್ಶಿಸಿದ್ದೇನೆ. ನಿಮ್ಮಿಷ್ಟದಂತೆ ನೀವು ಬದುಕಿ ಎಂಬುದು ನನ್ನ ಸಂದೇಶ" ಎಂದಿದ್ದಾಳೆ ಚೆಲುವೆ.

"ತಾನೂ ಹೀಗೆ ಮಾಡಿದ್ದು ನಮ್ಮ ತಂದೆತಾಯಿಯನ್ನು ಆತಂಕಕ್ಕೀಡು ಮಾಡಿದೆ. ಮುಸ್ಲಿಂ ಸಮುದಾಯ ನಮ್ಮ ಕುಟುಂಬದ ಮೇಲೆ ಏನು ಕ್ರಮಕೈಗೊಳ್ಳುತ್ತದೋ ಎಂಬ ದಿಗಿಲು ಅವರದು. ನನ್ನ ಅಜ್ಜ ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ ಇವರಂತೂ ಸಿಕ್ಕಾಪಟ್ಟೆ ಬೇಜಾರಾಗಿದ್ದಾರೆ. ನನ್ನನ್ನು ಕ್ಷಮಿಸಿ ಮನೆಗೆ ಸೇರಿಸುತ್ತೀರಾ ಎಂದು ನಂಬಿದ್ದೇನೆ ಎಂದು ಆಕೆ ಜರ್ಮನ್ ಟಿವಿ ವಾಹಿನಿಯೊಂದಿಗೆ ಪ್ರತಿಕ್ರಿಯಿಸಿದ್ದಾಳೆ.

More from Filmibeat

English summary
A Muslim model Sila Sahin, a 25-year-old Turkish German living in Berlin has upset her family by stripping for a series of saucy shots for Playboy. The 25-year-old’s shots for the May issue of the famous men’s magazine’s German edition include a breast-flashing one on the cover.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X