»   »  ಪ್ರೀತಿಯ ಅನ್ವೇಷಣೆ ಪ್ರೀತಿ ನೀ ಶಾಶ್ವತನಾ

ಪ್ರೀತಿಯ ಅನ್ವೇಷಣೆ ಪ್ರೀತಿ ನೀ ಶಾಶ್ವತನಾ

Subscribe to Filmibeat Kannada

ಫೈತನ್ ಎಂಟರ್‌ಟೈನರ್‍ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ, ಪ್ರೀತಿ ನೀ ಶಾಶ್ವತಾನಾ. ಆರ್.ವೆಂಕಟೇಶ್ ನಿರ್ಮಾಣದ ಈ ಚಿತ್ರಕ್ಕೆ ಬೆಂಗಳೂರು ದೊಡ್ಡಬಳ್ಳಾಪುರ ಹಾಗೂ ಸಕಲೇಶಪುರದಲ್ಲಿ ಹಾಡುಗಳು ಹಾಗೂ ಮಾತಿನ ಭಾಗವನ್ನು ಸುಮಾರು 45 ದಿನಗಳ ಕಾಲ ಸತತವಾಗಿ ಶೂಟಿಂಗ್ ನಡೆಸಿದ ನಂತರ ಆಕಾಶ್ ಧ್ವನಿಗ್ರಹಣ ಕೇಂದ್ರದಲ್ಲಿ ಡಬ್ಬಿಂಗ್ ಕೂಡ ಮುಕ್ತಾಯಗೊಳಿಸಿದ್ದು ಸದ್ಯದಲ್ಲೇ ರೀರೆಕಾರ್ಡಿಂಗ್‌ಗೆ ಹೋಗಲು ಅಣಿಯಾಗಿದೆ.

ಹರೆಯದ ಹುಡುಗನೊಬ್ಬ ನಿಜವಾದ ಪ್ರೀತಿಯನ್ನು ಹುಡುಕುವ ಪ್ರಯತ್ನದಲ್ಲಿ ಎಷ್ಟರಮಟ್ಟಿಗೆ ಸಫಲನಾಗುತ್ತಾನೆ. ಆತನಿಗೆ ತನ್ನ ಪ್ರೀತಿ ಸಿಗುತ್ತೋ, ಇಲ್ಲವೋ ಎಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಅಂತ್ಯದಲ್ಲಿ ಪ್ರೀತಿ ದೊಡ್ಡದೋ, ಜೀವನ ದೊಡ್ಡದೋ? ಎಂದು ನಿರೂಪಿಸುವಲ್ಲಿ ನಿರ್ದೇಶಕ ಎಲ್.ಎನ್.ಮೂರ್ತಿ ಎಷ್ಟರ ಮಟ್ಟಿಗೆ ಸಫಲರಾಗಿದ್ದಾರೆ ಎಂದು ಪ್ರೇಕ್ಷಕರ ಪ್ರಭುವೇ ನಿರ್ಧರಿಸಬೇಕಿದೆ.

ಅಕ್ಷಯ್ ಕುಮಾರ್ ಎಂಬ ಹೊಸ ಪ್ರತಿಭೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನನ್ನುಸಿರೇ, ಜಾಲಿಡೇಸ್ ಚಿತ್ರಗಳಲ್ಲಿ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕೀರ್ತಿ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಎಲ್.ಎನ್.ಮೂರ್ತಿ ಅವರೇ ಸಂಭಾಷಣೆ ಬರೆದಿದ್ದು ವೀನಸ್ ಮೂರ್ತಿ ಅವರ ಛಾಯಾಗ್ರಹಣ ರವಿವರ್ಮರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ಮುಂದಿನ ವಾರ ಬಿಡುಗಡೆಯಾಗಲಿರುವ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ ಕೆ.ಕಲ್ಯಾಣ್, ಸಂಕೇನಹಳ್ಳಿ ಮಂಜು, ಯಶವಂತಪುರ ಗೋಪಿ ಸಹ ನಿರ್ಮಾಪಕರಾಗಿದ್ದು ಶೋಭರಾಜ್, ಸಿದ್ದರಾಜ್ ಕಲ್ಯಾಣ್‌ಕರ್, ತಿಮ್ಮೇಗೌಡರು ಜಯಲಕ್ಷ್ಮಿ ಅಲ್ಲದೆ ಸಹ ನಿರ್ಮಾಪಕ ಗೋಪಿ ಅವರು ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

'ಟೂರಿಂಗ್ ಟಾಕೀಸ್': ಒಂದೇ ಸಿನಿಮಾ ಸುತ್ತ...!
ವಾಯ್ಸ್ ಆಫ್ ಬೆಂಗಳೂರಿಗೆ ಅಮೀರ್ ಖಾನ್?
ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್
ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada