»   » ಕನ್ನಡ ಚಿತ್ರರಂಗಕ್ಕೆ ಎಸ್ ನಾರಾಯಣ್ ಗುಡ್ ಬೈ

ಕನ್ನಡ ಚಿತ್ರರಂಗಕ್ಕೆ ಎಸ್ ನಾರಾಯಣ್ ಗುಡ್ ಬೈ

Posted By:
Subscribe to Filmibeat Kannada
S Narayan
ಗಾಂಧಿನಗರದಿಂದ ಇದೀಗ ತಾನೆ ಬಂದ ಬ್ರೇಕಿಂಗ್ ಸುದ್ದಿ. ಕಲಾ ಸಾಮ್ರಾಟ್ ಬಿರುದಾಂಕಿತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಎಸ್ ನಾರಾಯಣ್ ಕನ್ನಡ ಚಿತ್ರಗಳಿಗೆ ಗುಡ್ ಬೈ ಹೇಳಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟು ವಿದಾಯ ಘೋಷಿಸಿರುವುದಾಗಿ ನಾರಾಯಣ್ ತಿಳಿಸಿದ್ದಾರೆ.

"ಜನ ನನ್ನನ್ನು ಸ್ವೀಕರಿಸುತ್ತಿಲ್ಲ. ಚಿತ್ರರಂಗವನ್ನು ನಂಬಿ ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಇನ್ನು ಮುಂದೆ ಯಾವುದೇ ಚಿತ್ರಗಳನ್ನು ನಿರ್ದೇಶಿಸುವುದಿಲ್ಲ ಹಾಗೂ ನಿರ್ಮಿಸುವುದಿಲ್ಲ. ಆದರೆ ಯಾರಾದರು ಚಾನ್ಸ್ ಕೊಟ್ಟರೆ ಪಾತ್ರ ಮಾಡುತ್ತೇನೆ" ಎಂದಿದ್ದಾರೆ.

ಎಸ್ ನಾರಾಯಣ್ ಚಿತ್ರ ನಿರ್ಮಾಣ, ನಿರ್ದೇಶನ, ಸಂಗೀತ ನಿರ್ದೇಶನ, ಗೀತಸಾಹಿತ್ಯ, ಗಾಯನ ಹೀಗೆ ಹಲವಾರು ವಿಭಾಗಗಳಲ್ಲಿ ಕೈಯಾಡಿಸಿದವರು. ಹೀಗೆ ಮಾಡಿದ ಕಾರಣಕ್ಕೋ ಏನೋ ಅವರ ಪ್ರತಿಭೆ ಕೂಡ ಹರಿದು ಹಂಚಿಹೋಗಿತ್ತು.

ನಾರಾಯಣ್ ಏಕಾಏಕಿ ಈ ರೀತಿ ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ತಮ್ಮ ಸತತ ಸೋಲಿಗೆ ಕಾರಣ ಏನು ಎಂದು ಹುಡುಕಬೇಕಿತ್ತು. ಆಗ ಅವರ ಅರ್ಧ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ನಾಣಿ ಅಭಿಮಾನಿಗಳು ಅವರಿಗೆ ಹಿತವಚನ ಹೇಳಿದ್ದಾರೆ. ಆದರೆ ನಾಣಿ ಮಾತ್ರ ಯಾವುದೇ ಕಾರಣಕ್ಕೂ ತಮ್ಮ ಮನಸ್ಸು ಬದಲಾಯಿಸಿಕೊಳ್ಳಲ್ಲ ಎಂದಿದ್ದಾರೆ.

ಚೌಡಯ್ಯ, ಲಕ್ಷ್ಮಿ ನರಸಿಂಹ, ದೊಡ್ ಮನುಷ್ಯ, ನೆನಪಿದೆಯಾ ಓ ಗೆಳತಿ, ದಾಂಡಿಗ ಚಿತ್ರಗಳನ್ನು ನಾಣಿ ನಿರ್ದೇಶಿಸುತ್ತಿದ್ದಾರೆ. ಈಗ ಸಡನ್ ಆಗಿ ನಿವೃತ್ತಿ ಘೋಷಿಸಿದ ಕಾರಣ ಈ ಚಿತ್ರಗಳ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ಇನ್ನು ಮುಂದೆ ನಟನಾಗಿ ಜನ ಅವರನ್ನು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಯೂ ತಲೆ ಎತ್ತಿದೆ. (ಒನ್‌ಇಂಡಿಯಾ ಕನ್ನಡ)

English summary
Sad news for S Narayan fans: The actor has announced he doesn't plan to work as a director and producer. Narayan retires from direction and production will focus solely on his work as actor.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X