»   » 'ರಾಜ್' ದಾಖಲೆ ಅಳಿಸಿಹಾಕಿದ 'ಆಪ್ತರಕ್ಷಕ'

'ರಾಜ್' ದಾಖಲೆ ಅಳಿಸಿಹಾಕಿದ 'ಆಪ್ತರಕ್ಷಕ'

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್ ಅಭಿನಯದ 200ನೇ ಚಿತ್ರ 'ಆಪ್ತರಕ್ಷಕ'ನಿಗೆ ರಾಜ್ಯಾದ್ಯಂತ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲೇ ಬಾಕ್ಸಾಫೀಸಲ್ಲಿ ರು.1.35 ಕೋಟಿ ಗಳಿಸಿದೆ. ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜ್' ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ ರು.85 ಲಕ್ಷ ಗಳಿಸಿತ್ತು. 'ರಾಜ್' ದಾಖಲೆಯನ್ನು 'ಆಪ್ತರಕ್ಷಕ' ಅಳಿಸಿಹಾಕಿದೆ.

'ಆಪ್ತರಕ್ಷಕ' ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬೀಳುತ್ತಿದ್ದು ಟಿಕೆಟ್ ಗಳು ಸಿಗದೆ ಪರದಾಡುವಂತಾಗಿದೆ. ಬೆಂಗಳೂರಿನ ನರ್ತಕಿ ಮತ್ತು ಉಮಾ ಚಿತ್ರಮಂದಿರದ ಟಿಕೆಟೊಂದರ ಬೆಲೆ ಕಾಳಸಂತೆಯಲ್ಲಿ ರು.2,500ರಿಂದ ರು.3,000ವರೆಗೂ ಮಾರಟವಾಗುತ್ತಿವೆ. ನಾಗವಲ್ಲಿ ರಹಸ್ಯವನ್ನು ಬಯಲಿಗೆಳೆಯುವುದೇ 'ಆಪ್ತರಕ್ಷಕ' ಚಿತ್ರದ ಕಥಾಹಂದರ.

'ಆಪ್ತರಕ್ಷಕ' ಚಿತ್ರ ರಾಜ್ಯಾದ್ಯಂತ 73 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಬೆಂಗಳೂರಿನ ನರ್ತಕಿ, ಈಶ್ವರಿ, ಉಮಾ ಮತ್ತು ವೀರಭದ್ರೇಶ್ವರ ಸೇರಿದಂತೆ 30 ಚಿತ್ರಮಂದಿಗಳಲ್ಲಿ ತೆರೆಕಂಡಿದೆ. ವಿಷ್ಣುವರ್ಧನ್ ಅವರ ಅಭಿನಯ, ಗುರುಕಿರಣ್ ಸಂಗೀತ, ಕೋಮಲ್ ಕಾಮಿಡಿ, ಕಣ್ಮನ ಸೆಳೆಯುವ ಚಿತ್ರೀಕರಣ, ವಸ್ತ್ರವಿನ್ಯಾಸ,ಕಲೆ ಚಿತ್ರದಲ್ಲಿನ ಪ್ರಮುಖ ಆಕರ್ಷಣೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada