»   »  ಗೃಹಬಂಧನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

ಗೃಹಬಂಧನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್!

Subscribe to Filmibeat Kannada
Golden Star Ganesh
ನಮ್ಮ ಕಾಮಿಡಿ ಟೈಮ್ ಗಣೇಶ್ ಎಲ್ಲಿ? ಕಳೆದ ಎರಡು ವರ್ಷಗಳಲ್ಲಿ ಕನ್ನಡದ ಬಹು ಬೇಡಿಕೆಯ ನಟ ಗಣೇಶ್ ಮನೆಯಿಂದ ಹೊರಗೆ ಕಾಲಿಡುತ್ತಿಲ್ಲವಂತೆ. ಕಾರಣ ಆತನ ಗ್ರಹಗತಿ ನೆಟ್ಟಗಿಲ್ಲ ಎಂಬ ಭವಿಷ್ಯವಾಣಿ. ಭಾರಿ ಜಾಗ್ರತೆ ವಹಿಸ ಬೇಕೆಂದು ಜ್ಯೋತಿಷಿಗಳ ಆದೇಶವಂತೆ. ಹೆಚ್ಚು ಕಮ್ಮಿ ಚಿತ್ರವೊಂದಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವ ಗಣೇಶ್ ಸದ್ಯಕ್ಕಂತೂ ಮನೆಯಿಂದ ಹೊರಗೆ ಬರುತ್ತಿಲ್ಲ. ತನ್ನ ಎಲ್ಲಾ ಶೂಟಿಂಗ್, ಖಾಸಗಿ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭಗಳನ್ನು ಜ್ಯೋತಿಷಿಗಳ ಆದೇಶದಂತೆ ತಾತ್ಕಾಲಿಕವಾಗಿ ರದ್ದು ಗೊಳಿಸಿದ್ದಾರೆ.

ಗಣೇಶ್ ಕುಟುಂಬದ ಮೂಲದ ಪ್ರಕಾರ ಈ ತಿಂಗಳ 27ನೇ ತಾರೀಕಿನ ನಂತರ ಗಣೇಶ್ ದರ್ಶನವಾಗುತ್ತದೆ. ಸದ್ಯಕ್ಕೆ ತನ್ನ ನಾಗರಬಾವಿ ಮನೆಯಲ್ಲಿರುವ ಗಣೇಶ್ ಜ್ಯೋತಿಷಿಗಳು ಆದೇಶವನ್ನು ಶಿರಸಾ ಪಾಲಿಸುತ್ತಿದ್ದಾರೆ. ಮಾರ್ಚ್ ತಿಂಗಳಿಂದ ಗಣೇಶ್ ತನ್ನ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಗೃಹಬಂಧನದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ನಂತರ ಗಣೇಶ್ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

ಗರುಡ ಮಾಲ್ ವ್ಯವಸ್ಥಾಪಕ ನಂದೀಶ್ ತನ್ನ ಮಾಲ್ ನ ನಾಲ್ಕನೇ ವರ್ಷದ ಆಚರಣೆಗೆ ಮೇ 22 ರಂದು ಮುಖ್ಯ ಅತಿಥಿಯಾಗಿ ಭಾಗವಹಿಸಲು ಗಣೇಶ್ ಅವರನ್ನು ಕೇಳಿಕೊಂಡಾಗ ಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರಂತೆ. ಈಗ ಬರಲು ಸಾಧ್ಯವಿಲ್ಲ. ಮೇ.27 ರ ನಂತರ ಕರೆಯಿರಿ ಬೇಕಾದರೆ ಬರುತ್ತೇನೆ ಎಂದು ಗಣೇಶ್ ಉತ್ತರ ಕೊಟ್ಟರಂತೆ.

ಗಣೇಶ್ ಗೆ ತನಗೆ ಈ ಹಿಂದಿನ ಯಶಸ್ಸು ಸಿಗುವುದು ಕಷ್ಟ. ಜುಲೈ ತಿಂಗಳ ನಂತರ ಸುಧಾರಿಸಿಕೊಂಡರೂ ತನ್ನ ಹಿಂದಿನ ಆ ಜನಪ್ರಿಯತೆ ಮತ್ತೆಂದೂ ಸಿಗುವುದಿಲ್ಲ ಎಂದು ಗಣೇಶ್ ಅವರ ಜ್ಯೋತಿಷಿ ಬಸವರಾಜ್ ಹೇಳಿದ್ದಾರೆ. ಹಾಗಾಗಿ ಗಣೇಶ್ ತಾತ್ಕಾಲಿಕವಾಗಿ ತನಗೆ ತಾನೇ ಗೃಹಬಂಧನವನ್ನು ವಿಧಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...