»   » ದೂರದರ್ಶನದಲ್ಲಿ ಡಾ.ರಾಜ್ ಚಿತ್ರಗೀತೆಗಳು

ದೂರದರ್ಶನದಲ್ಲಿ ಡಾ.ರಾಜ್ ಚಿತ್ರಗೀತೆಗಳು

Posted By:
Subscribe to Filmibeat Kannada

ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ದೂರದರ್ಶನ ಕೇಂದ್ರ ಏ.24ರಂದು ರಾತ್ರಿ 8 ಗಂಟೆಗೆ ಡಾ.ರಾಜ್ ಕುಮಾರ್ ಅವರು ನಟಿಸಿದ ಚಿತ್ರಗಳ ವಿಶೇಷ ಚಿತ್ರಗೀತೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ.

ಇದಕ್ಕೂ ಮುನ್ನ ಈ ಸಂದರ್ಭದಲ್ಲಿ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಸಂಗೀತ ದಿಗ್ಗಜರಾದ ಡಾ.ಆರ್.ಕೆ.ಶ್ರೀಕಂಠನ್ ಅವರ ಸಂದರ್ಶನ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಡಾ.ರಾಜ್ ಅವರ ಜನಪ್ರಿಯ ಚಿತ್ರಗಳನ್ನು ಕೇಳುತ್ತಾ ಅಣ್ಣಾವ್ರ ಹುಟ್ಟುಹಬ್ಬವನ್ನು ಅರ್ಥವತ್ತಾಗಿ ಆಚರಿಸಬಹುದು. ಇದಕ್ಕೆ ಬೆಂಗಳೂರು ದೂರದರ್ಶನ ಕೇಂದ್ರ ಅಭಿಮಾನಿ ದೇವರುಗಳಿಗೆ ಜೊತೆಯಾಗಲಿದೆ. ಹಾಗೆಯೇ ಗಾನಗಂಧರ್ವನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹತ್ತು ಹಾಡುಗಳ ಮೂಲಕ ಅರ್ಪಿಸಿದ ಅಪೂರ್ವ ಲೇಖನ ಓದಲು ಮರೆಯದಿರಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada