twitter
    For Quick Alerts
    ALLOW NOTIFICATIONS  
    For Daily Alerts

    ಗಂಡಂದಿರ ಮೇಲೆ ಹೆಂಡ್ತೀರ ದರ್ಬಾರ್

    By Staff
    |

    ಜಿ. ರಾಮಚಂದ್ರನ್ ಮೂಲತಃ ನಾಟಕ ಕಾಲಾವಿದರು, ಜೀವನೋಪಾಯಕ್ಕಾಗಿ ಕೊಳ್ಳೆಗಾಲದಿಂದ ಚೆನ್ನೈಗೆ ಹೋಗಿ ಅಲ್ಲಿ 5 ತಮಿಳು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಕನ್ನಡದಲ್ಲಿ ಒಂದು ಚಿತ್ರವನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ 'ಹೆಂಡ್ತೀರ ದರ್ಬಾರ್' ಎಂಬ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದು ತಮಿಳಿನ "ವರವು ಎತ್ತಣ ಸಲವು ಪತ್ತಣ" ಎಂಬ ಚಿತ್ರದ ಕನ್ನಡ ಅವತರಣಿಕೆ.

    ಈಗಾಗಲೇ ಗಂಡನಮೇಲೆ ಹೆಂಡತಿಯರ ದಬ್ಬಾಳಿಕೆ ಕುರಿತಾದ ಅನೇಕ ಚಿತ್ರಗಳು ಬಂದು ಹೋಗಿದ್ದರೂ ಹೊಸ ರೀತಿಯ ಕಾನ್ಸಪ್ಟ್ ಇದಾಗಿದೆ ಎಂದು ನಿರ್ದೇಶಕ ವಿ. ಶೇಖರ್ ಹೇಳುತ್ತಾರೆ. ಕಳೆದ ಶನಿವಾರ ಕೌಶಿಕ್ ಸ್ಟುಡಿಯೋದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈಗಾಗಲೇ ಬೆಂಗಳೂರು ಸುತ್ತಮುತ್ತ ಸುಮಾರು 15 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು ರಮೇಶ್ ಅರವಿಂದ್, ಮೀನಾ, ರಂಗಾಯಣ ರಘು, ಸಾಧುಕೋಕಿಲ ಪ್ರಮುಖ ತಾರಾಗಣದಲ್ಲಿದ್ದಾರೆ.

    ತಮಿಳಿನಲ್ಲಿ ನಾಜರ್, ರಾಧಿಕ ಮಾಡಿದ ಪಾತ್ರವನ್ನು ಇಲ್ಲಿ ರಮೇಶ್, ಮೀನಾ ಮಾಡುತ್ತಿದ್ದಾರೆ. ನಿರ್ದೇಶಕ ಶೇಖರ್ ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟವರು ಅವರು ನಿರ್ದೇಶಿಸಿದ ಎಲ್ಲಾ ಚಿತ್ರಗಳು ಯಶಸ್ವಿಯಾಗಿದೆ. ಈ ಚಿತ್ರದ ಕಥೆಕೂಡ ಅವರದೇ ಆಗಿದ್ದು ಪ್ರಥಮ ಬಾರಿಗೆ ಕನ್ನಡ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಹಾಗೂ ಸಾಧು ಕೋಕಿಲಾ ಒಂದಾಗಿ ಹಾಸ್ಯದ ಹೊನಲನ್ನು ಹರಿಸಲಿದ್ದಾರೆ. ನಿರ್ಮಾಪಕ ರಾಮಚಂದ್ರನ್ ಎಂ.ಎಲ್.ಎ. ಆಗಿ ಒಂದು ಪಾತ್ರ ಮಾಡುತ್ತಿದ್ದಾರೆ.

    ನಟ ರಮೇಶ್ ಮಾತನಾಡುತ್ತಾ ಇದೊಂದು ಗಂಭೀರ ತಿಳಿಹಾಸ್ಯ ಲೇಪಿತ ಸಂಸಾರಿಕ ಕಥೆಯಾಗಿದೆ. ನಟಿ ಮೀನರವರ ಜೊತೆಗೆ ಬಹಳ ದಿನಗಳ ನಂತರ ಅಭಿನಯಿಸುತ್ತಿದ್ದೇನೆ. ಸಂಸಾರದಲ್ಲಿ ಪ್ರೀ ಪ್ಲಾನ್ ಮಾಡಿಕೊಳ್ಳದೇ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಹಾಗೇ ಮಾಡಲು ಹೋದರೆ ಅನರ್ಥಗಳಿಗೆ ಎಡೆ ಮಾಡಿಕೊಟ್ಟಾಂತಗುತ್ತದೆ ಎಂಬುದನ್ನು ಗಂಡ ಹೆಂಡತಿಯರ ಮೂಲಕ ಹೇಳುತ್ತೀದ್ದೆವೆ ಎಂದರು.

    ನಾಯಕಿ ಮೀನಾ ಮಾತನಾಡುತ್ತಾ ಮದುವೆಯಾದ ನಂತರ ಅಭಿನಯಿಸುತ್ತಿರುವ ಪ್ರಥಮ ಚಿತ್ರವಿದು. ಉತ್ತಮ ಪಾತ್ರ ಅಲ್ಲದೆ ಶೇಖರ್ ಅಂತಹ ನಿರ್ದೇಶಕರ ಕೆಳಗೆ ಕೆಲಸಮಾಡುವುದೇ ಒಂದು ದೊಡ್ಡ ಪಾಠ ಎಂದರು. ರಂಗಾಯಣ ರಘು ಮಾತನಾಡುತ್ತಾ ಶೇಖರ್ ಅಂತಹ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬುದು ಗಾದೆಯಾದರೂ ಇದರಲ್ಲಿ ಹಾಸಿಗೆ ಇದ್ದರು ಇಲ್ಲದಿದ್ದರೂ ಕಾಲು ಮುದುರಿಕೊಂಡು ಬಿದ್ದುಕೋ ಎಂದು ನಮ್ಮ ಪಾತ್ರಗಳು ಹೇಳುತ್ತವೆ.

    ಅಭಿನಯದ ಜೊತೆಗೆ ಸಂಗೀತ ಸಂಯೋಜನೆ ಕೂಡ ಮಾಡಿರುವ ಸಾಧುಕೋಕಿಲ ಮಾತನಾಡುತ್ತಾ ಚಿತ್ರದಲ್ಲಿ 5 ಹಾಡು ಇದ್ದು ಎಲ್ಲಾ ಹಾಡುಗಳು ಚಿತ್ರಕಥೆಯ ಜೊತೆಗೆ ಬಂದು ಹೋಗುತ್ತವೆ. ನಿರ್ಮಾಪಕರು ನಮ್ಮನ್ನು ನಂಬಿ ಬಂದಿರುತ್ತಾರೆ. ಅವರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮದು ಎಂದರೂ ಈಗಾಗಲೇ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ನಟಿ ಅಂಬಿಕಾ ಸೋನಿ ಸಾಧುಕೋಕಿಲ ಹೆಂಡತಿಯ ಪಾತ್ರ ನಿರ್ವಹಿಸಿದರೆ, ರಂಗಾಯಣ ರಘು ಜೋಡಿಯಾಗಿ ಪ್ರೀತಿ ಅಭಿನಯಿಸಿದ್ದಾರೆ. ರಾಜು ಮಹೇಂದ್ರ ಈ ಚಿತ್ರಕ್ಕೆ ಛಾಯಾ ಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    Tuesday, December 22, 2009, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X