»   » ಪ್ರೈವೇಟ್ ನಂಬರ್ ನಲ್ಲಿ ಚಿನ್ನದ ಗಣಿಗೆ ಪಯಣ

ಪ್ರೈವೇಟ್ ನಂಬರ್ ನಲ್ಲಿ ಚಿನ್ನದ ಗಣಿಗೆ ಪಯಣ

Posted By:
Subscribe to Filmibeat Kannada

ಊರಿಂದ ಊರಿಗೆ ಪಯಣಿಸಬೇಕಾದರೆ ಬಸ್ಸು, ರೈಲು, ಕಾರು ಇತ್ಯಾದಿ ವಾಹನಗಳನ್ನು ಅವಲಂಬಿಸುತ್ತೇವೆ. ಆದರೆ ಯುವಜೋಡಿಯೊಂದು ಬೈಕ್‌ನಲ್ಲಿ ಪ್ರವಾಸ ಕೈಗೊಂಡಿದೆ. ಬೆಂಗಳೂರಿನಿಂದ ಆರಂಭವಾದ ಇವರ ಪಯಣ ಚಿನ್ನದ ಗಣಿಯವರೆಗೂ ಸಾಗುತ್ತದೆ.

ಈ ಸಂದರ್ಭದಲ್ಲಿ ಯುವಜೋಡಿ ಕಾಂತರಾಜ್ ರಚನೆಯ 'ಚಲಿಸುತಿದೆ ನೆನೆ ನೆನೆದು ಕನಸುಗಳ ಮೆರವಣಿಗೆ...' ಎಂಬ ಹಾಡು ಕೂಡ ಹೇಳುತ್ತಾರೆ. ಈ ಗೀತೆಯ ಚಿತ್ರೀಕರಣವನ್ನು 'ಪ್ರೈವೇಟ್ ನಂ' ಚಿತ್ರಕ್ಕಾಗಿ ನಿರ್ದೇಶಕ ಆನಂದಕುಮಾರ್ ಚಿತ್ರೀಕರಿಸಿಕೊಂಡರು. ಪ್ರೀತಮ್ ಹಾಗೂ ನಿಹಾರಿಕ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಎರಡು ಗೀತೆಗಳ ಚಿತ್ರೀಕರಣ ಬಾಕಿಯಿದ್ದು, ಆ ಗೀತೆಗಳು ಜುಲೈ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾದ ಪ್ರಸಿದ್ಧ ದ್ವೀಪ ಮಡಗಾಸ್ಕರ್ ಹಾಗೂ ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕರು. ಎ.ಕೆ.ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಣೇಶ್‌ಶೆಟ್ಟಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಗಸ್ತ್ಯ ರವರ ಸಂಗೀತವಿದೆ.

ಪ್ರೇಮಾನಂದ್ ಛಾಯಾಗ್ರಹಣ, ವೆಂಕಟೇಶ್‌ಪ್ರಸಾದ್ ಸಂಭಾಷಣೆ, ರಾಜೇಶ್ ಫರ್ನಾಂಡಿಸ್ ತಾಂತ್ರಿಕ ನಿರ್ದೇಶನ, ರಿಷಿಬಾರ್ನೆ ಅವರ ಸಂಕಲನವಿದೆ. ಪ್ರೀತಂ, ನಿಹಾರಿಕಸಿಂಗ್, ಕ್ಲಾಡಿಯಾ, ಶರಣ್, ಚಿದಾನಂದ್, ಶ್ರೀಲಕ್ಷ್ಮೀ, ಬ್ಯಾಂಕ್‌ಜನಾರ್ದನ್, ಅರಿಸಿಕೆರೆರಾಜು, ಕೆಂಪೇಗೌಡ, ರಾಜೇಶ್ ಮುಂತಾದವರ ತಾರಾಗಣ ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada