»   » ಮೀಸೆ ತ್ಯಾಗ ಮಾಡಿದ 'ನಮ್ಮಣ್ಣ ಡಾನ್' ರಮೇಶ್

ಮೀಸೆ ತ್ಯಾಗ ಮಾಡಿದ 'ನಮ್ಮಣ್ಣ ಡಾನ್' ರಮೇಶ್

Posted By:
Subscribe to Filmibeat Kannada

ತೆರೆಯ ಮೇಲೆ ರಮೇಶ್ ಅರವಿಂದ್ ಸಾಕಷ್ಟು ಬಾರಿ ತ್ಯಾಗರಾಜನಾಗಿ ಮಿಂಚಿದ್ದಾರೆ. ಆದರೆ ಅವರು ಈ ಬಾರಿ ತಮ್ಮ ಮೀಸೆಯನ್ನೇ ತ್ಯಾಗ ಮಾಡಿದ್ದಾರೆ. 'ನಮ್ಮಣ್ಣ ಡಾನ್' ಚಿತ್ರ ಬಾಕ್ಸಾಫೀಸರಲ್ಲಿ ದಯನೀಯ ಸೋಲು ಕಂಡ ಬಳಿಕ ರಮೇಶ್ ಹೀಗೆ ಮಾಡಿಕೊಂಡಿರುವುದು ಚಿತ್ರೋದ್ಯಮ ಗಡ್ಡಕೆರೆದುಕೊಳ್ಳುವಂತಾಗಿದೆ.

ಆದರೆ 'ನಮ್ಮಣ್ಣ ಡಾನ್' ನಿರೀಕ್ಷಿಸಿದ ಮಟ್ಟದಲ್ಲಿ ಗೆಲುವು ಸಾಧಿಸದೆ ಇರುವುದಕ್ಕೂ ರಮೇಶ್ ಮೀಸೆ ಬೋಳಿಸಿಕೊಳ್ಳುವುದಕ್ಕೂ ಸುತಾರಾಂ ಸಂಬಂಧವಿಲ್ಲ. ಅವರು ಹೀಗೆ ನುಣ್ಣಗೆ ಮಾಡಿಸಿಕೊಂಡಿರುವುದು ಮುಸ್ಸಂಜೆ ಮಹೇಶ್ ಅವರ ತುಂತುರು ಚಿತ್ರಕ್ಕಾಗಿ. ಪಾತ್ರದ ಅಗತ್ಯಕ್ಕೆ ತಕ್ಕಂತೆ ಅವರ ಗೆಟಪ್ ಕೂಡ ಬದಲಾಗಿದೆಯಂತೆ.

ಅಂದಹಾಗೆ ಈ ಚಿತ್ರದ ನಾಯಕಿ ಅನು ಪ್ರಭಾಕರ್. ಯಾರಾದರೆ ನನಗೇನು ಖ್ಯಾತಿಯ ರಿಷಿಕಾ ಸಿಂಗ್ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಿಸುತ್ತಿದ್ದಾರೆ. ಇದೊಂದು ಕೌಟುಂಬಿಕ ಹಾಗೂ ಮನರಂಜನಾತ್ಮಕ ಚಿತ್ರ. ಈ ಹಿಂದೆ ಶಾಪ, ಸ್ನೇಹಲೋಕ ಹಾಗೂ ಶ್ರೀರಸ್ತು ಶುಭಮಸ್ತು ಚಿತ್ರಗಳಲ್ಲಿ ಅನು ಹಾಗೂ ರಮೇಶ್ ಅಭಿನಯಿಸಿದ್ದರು. (ಏಜೆನ್ಸೀಸ್)

English summary
After Nammanna Don, Kannada actor Ramesh Aravind back with diffrent getup. This time he removes his Moustache for Mussanje Mahesh's movie Tunturu. Anu Prabhakar plays lady lead role in this film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X