»   » ಆಕ್ಷನ್, ಕಟ್ ಹೇಳಲಿದ್ದಾರೆ ವಿನಯಾ ಪ್ರಸಾದ್

ಆಕ್ಷನ್, ಕಟ್ ಹೇಳಲಿದ್ದಾರೆ ವಿನಯಾ ಪ್ರಸಾದ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕಿಯ ಸೇರ್ಪಡೆಯಾಗಲಿದೆ. ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ವಿನಯಾ ಪ್ರಸಾದ್ (ವಿನಯಾ ಪ್ರಕಾಶ್) ಆಕ್ಷನ್, ಕಟ್ ಹೇಳಲು ಸಿದ್ಧರಾಗಿದ್ದಾರೆ. ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅವರು ನಿರ್ದೇಶನದ ಮಂತ್ರದಂಡವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಅವರ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ 20ಕ್ಕೂ ಹೆಚ್ಚು ಪಾತ್ರಗಳಿರುತ್ತವೆ. ಸಂಪೂರ್ಣ ಮನರಂಜನಾತ್ಮಕ ಚಿತ್ರ.ಮುಖ್ಯಪಾತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಆದರೆ ಉತ್ತಮ ಎಂಬುದು ವಿನಯಾ ಪ್ರಸಾದ್ ಅಭಿಪ್ರಾಯ. ಸದ್ಯಕ್ಕೆ ವಿನಯಾ ಪ್ರಸಾದ್ ಕೈಯಲ್ಲಿ ಐದು ಚಿತ್ರಕತೆಗಳು ಸಿದ್ಧವಾಗಿವೆಯಂತೆ.

ಇತ್ತೀಚೆಗೆ ಆಸ್ಪತ್ರೆಯಲ್ಲಿ 12ದಿನಗಳ ಕಾಲ ಚಿಕಿತ್ಸೆ ಪಡೆಯಬೇಕಾಯಿತು. ಆ ಸಂದರ್ಭದಲ್ಲಿ ಮತ್ತೆ ಐದು ಚಿತ್ರಕತೆಗಳನ್ನು ತಯಾರಿಸಿಕೊಂಡಿದ್ದೇನೆ ಎನ್ನುತ್ತಾರೆ ವಿನಯಾ ಪ್ರಸಾದ್. ರಾಜ್ಯದಲ್ಲಷ್ಟೆ ಅಲ್ಲದೆ ಆಂಧ್ರ ಪ್ರದೇಶ ಮತ್ತು ಕೇರಳ ಚಿತ್ರರಂಗದಲ್ಲೂ ವಿನಯಾ ಪ್ರಸಾದ್ ಸೈ ಅನ್ನಿಸಿಕೊಂಡಿದ್ದಾರೆ.

ಚಿತ್ರ ನಿರ್ದೇಶನದ ಜೊತೆಗೆ ಮಗಳು ಪ್ರಥಮಾ ಪ್ರಸಾದ್ ಭವಿಷ್ಯದ ಬಗ್ಗೆ ವಿನಯಾ ಅವರಿಗೆ ಎಲ್ಲಿಲ್ಲದ ಅಕ್ಕರೆ. ಕಥಕ್ ಮತ್ತು ಭರತನಾಟ್ಯ ಕಲಾವಿದೆ ಆಗಿರುವ ಪ್ರಥಮಾಗಾಗಿ ಬೆಂಗಳೂರು ಮತ್ತು ಕೇರಳದಲ್ಲಿ ಡ್ಯಾನ್ಸ್ ಸ್ಕೂಲ್ ಸ್ಥಾಪಿಸುವ ಆಲೋಚನೆಯೂ ವಿನಯಾ ಅವರಿಗಿದೆ.

ಪ್ರಥಮಾ ಅವರಿಗೆ ಈಗಾಗಲೇ ಚಿತ್ರದಲ್ಲಿ ನಟಿಸುವಂತೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದಿವೆ. ಆದರೆ ಉತ್ತಮ ಪಾತ್ರಗಳನ್ನು ಬಯಸುತ್ತಿರುವ ವಿನಯಾ ಅವರು ತಮ್ಮ ಮಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ತೀರ್ಮಾನಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada