Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜ್‌ಗೆ ಭಾರತ ರತ್ನ; ಅಡ್ಡಗಾಲು ಹಾಕಿದ್ದ ವ್ಯಕ್ತಿ ಯಾರು?
ಭಾನುವಾರ (ಏ.24)ರಂದು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ನೆಪದಲ್ಲಿ ಅವರನ್ನು ನೆನೆಸಿಕೊಳ್ಳಲು, ಪರಸ್ಪರ ಸಂಭ್ರಮ ಸಡಗರಗಳನ್ನು ಹಂಚಿಕೊಳ್ಳಲು ಅಭಿಮಾನಿ ದೇವರುಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕರ್ನಾಟಕ ರತ್ನ ಪುರಸ್ಕೃತ ರಾಜಣ್ಣನಿಗೆ ದೇಶದ ಅತ್ಯುನ್ನತ ಪುರಸ್ಕಾರ ಭಾರತರತ್ನ ನೀಡಬೇಕಾಗಿತ್ತು ಎಂಬ ಕೂಗು ಮುಂಚಿನಿಂದಲೂ ಕೇಳಿಬರುತ್ತಿದೆ. ಆದರೆ ರಾಜ್‌ಗೆ ಭಾರತ ರತ್ನ ನೀಡಲು ರಾಜ್ಯ ರಾಜಕಾರಣಿಯೊಬ್ಬ ಅಡ್ಡಗಾಲು ಹಾಕಿದ್ದರು ಎಂಬ ಅಂಶ ಈಗ ದಿಢೀರ್ ಎಂದು ಸ್ಫೋಟಗೊಂಡಿದೆ.
1990ರಲ್ಲೇ ರಾಜ್ ಅವರಿಗೆ ಭಾರತ ರತ್ನ ಸಿಗುವ ಸಾಧ್ಯತೆಗಳಿತ್ತು. ಅಂದಿನ ಪ್ರಧಾನಿ ವಿ ಪಿ ಸಿಂಗ್ ಅವರಿಗೆ ಪ್ರಶಸ್ತಿ ನೀಡುವ ಸಂಬಂಧ ಮನವಿ ಸಲ್ಲಿಸಲಾಗಿತ್ತು. ಪ್ರಧಾನಿ ಕಚೇರಿಯಿಂದಲೂ ಸಕಾರಾತ್ಮಕ ಸ್ಪಂದನೆಯೂ ಲಭ್ಯವಾಗಿತ್ತು.ಆದರೆ ರಾಜ್ಯ ರಾಜಕಾರಣಿಯೊಬ್ಬರು ಹಾಕಿದ ಅಡ್ಡಗಾಲಿನ ಕಾರಣ ಅಣ್ಣಾವ್ರಿಗೆ ಈ ಪುರಸ್ಕಾರ ಕೈತಪ್ಪಿತು ಎಂಬ ಮಾತುಗಳು ಕೇಳಿಬಂದಿವೆ.
ಈ ಗಂಭೀರ ಆರೋಪವನ್ನು ಮಾಡಿರುವವರು ಟಿಡಿಆರ್ ಹರಿಶ್ಚಂದ್ರಗೌಡ. ಆದರೆ ಆ ರಾಜಕಾರಣಿ ಯಾರು? ಯಾವ ಕ್ಷೇತ್ರದವರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.ರಾಜ್ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ ಹರಿಶ್ಚಂದ್ರಗೌಡ ಅವರು ಈ ಗಂಭೀರ ಆರೋಪ ಮಾಡಿ ಗಮನಸೆಳೆದಿದ್ದಾರೆ. ಅವರು ಆದಷ್ಟು ಬೇಗ ರಾಜಕಾರಣಿಯ ಹೆಸರನ್ನೂ ಬಹಿರಂಗಪಡಿಸಿದರೆ ಮತ್ತಷ್ಟು ಸತ್ಯಾಸತ್ಯತೆಗಳು ಹೊರಬೀಳುವ ಸಾಧ್ಯತೆಗಳಿವೆ.