»   »  ಗವಿಪುರಂ ಕೊಳಗೇರಿಯಲ್ಲಿ ಯೋಗೀಶ್ 'ಧೂಳ್'

ಗವಿಪುರಂ ಕೊಳಗೇರಿಯಲ್ಲಿ ಯೋಗೀಶ್ 'ಧೂಳ್'

Subscribe to Filmibeat Kannada

ಕಿರಿ ವಯಸ್ಸಿನಲ್ಲೇ ನಾಯಕನ ಪಟ್ಟ ಅಲಂಕರಿಸಿ, ಕನ್ನಡ ಚಿತ್ರರಂಗದ ಬೇಡಿಕೆ ನಟರಾಗಿರುವವರು ಯೋಗೀಶ್. ಸದ್ಯ ಇವರ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಧೂಳ್'. ಪ್ರಸ್ತುತ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದ್ದು, ನಗರದ ಗವೀಪುರಂನ ಸ್ಲಂನಲ್ಲಿ ಚಿತ್ರದ ಸಾಹಸ ಸನ್ನಿವೇಶ ಹಾಗೂ ಒಂದು ಗೀತೆ ಚಿತ್ರೀಕರಣಗೊಂಡಿದೆ.

ನಾಯಕ ಚಿಕ್ಕ ವಯಸ್ಸಿನಿಂದಲ್ಲೂ ದ್ವೇಷಿಸುತ್ತಿದ್ದ ವ್ಯಕ್ತಿ ಬಹಳ ದಿನಗಳ ನಂತರ ಎದುರಾಗುತ್ತಾನೆ. ಅವನನ್ನು ನೆನೆದರೆ ಕೆಂಡಾಮಂಡಲವಾಗುವ ನಾಯಕ ಎದುರು ಸಿಕ್ಕರೆ ಬಿಡುತ್ತಾನೆಯೇ? ಆಗ ಜರಗುತ್ತದೆ ಅವರಿಬ್ಬರ ನಡುವೆ ಮಾರಾಮಾರಿ. ಈ ಸಾಹಸ ಸನ್ನಿವೇಶ ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸೊಗಸಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಧರಣಿ ತಿಳಿಸಿದ್ದಾರೆ.

ಶ್ರೀಸೇವಾಲಾಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಎಚ್.ಸುನೀಲ್ ನಿರ್ಮಿಸುತ್ತಿರುವ 'ಧೂಳ್' ಚಿತ್ರವನ್ನು ಧರಣಿ ನಿರ್ದೇಶಿಸುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ, ಕೆ.ದತ್ತು ಛಾಯಾಗ್ರಹಣ, ಕೆ.ರಾಮ್‌ನಾರಾಯಣ್ ಸಂಭಾಷಣೆ, ಮೋಹನ್ ಪಂಡಿತ್ ಕಲೆ ಹಾಗೂ ರವಿವರ್ಮ ಅವರ ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಅಂದ್ರಿತಾ ರೇ, ಪ್ರಕಾಶ್ ರೈ, ಓಂಪ್ರಕಾಶ್‌ರಾವ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada