twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ತಾರ ಫಸ್ಟ್, ಮಲ್ಲಿಗೆ ನೆಕ್ಸ್ಟ್, ಆಮೇಲೆ ಅನಾಥರು!

    By Super Admin
    |

    ಈವಾರದ ಟಾಪ್ 5 ಕನ್ನಡ ಚಲನಚಿತ್ರಗಳು ಇಲ್ಲಿವೆ. ಬಾಕ್ಸಾಫೀಸ್ ಗಳಿಕೆ ಮೇಲೆ ಚಿತ್ರಗಳಿಗೆ ಶ್ರೇಯಾಂಕ ನೀಡಲಾಗಿದೆ.

    1. ಚೆಲುವಿನ ಚಿತ್ತಾರ : ವರ್ಷದ ಮೆಗಾ ಹಿಟ್ ಸಿನಿಮಾ ಎನ್ನುವ ಖ್ಯಾತಿಗೆ ಚಿತ್ತಾರ ಪಾತ್ರವಾಗಿದೆ. ಕಾದಲ್ ತಮಿಳು ಚಿತ್ರದ ಕನ್ನಡ ರೂಪವೇ ಈ ಚಿತ್ತಾರ. ಮುಂಗಾರು ಮಳೆಗಿಂತಲೂ ಹೆಚ್ಚಿನ ಹಣ ಸಂಗ್ರಹಿಸುವ ಸೂಚನೆಗಳು ಸಿಕ್ಕಿವೆ. ಎಸ್.ನಾರಾಯಣ್ ಅಂತೂ ಖುಷಿಯಲ್ಲಿ ತೇಲುತ್ತಿದ್ದಾರೆ. ಈ ರೀಮೇಕ್ ಚಿತ್ರ ಗೆದ್ದ ಖುಷಿಯಲ್ಲಿಯೇ, ಇನ್ನೊಂದು ರೀಮೇಕ್ ಸಿನಿಮಾ ತೆಗೆಯುವ ಅಪಾಯವೂ ಇದೆ! ಚಿತ್ರದ ಗೆಲುವಿಗೆ ಗಣೇಶ್ ಮತ್ತು ಅಮೂಲ್ಯ ಕಾರಣ ಎಂಬುದನ್ನು ನಾರಾಯಣ್ ಮರೆಯದಿದ್ದರೇ ಸಾಕು ಎನ್ನುತ್ತಾರೆ ಪ್ರೇಕ್ಷಕರು.

    2. ಮಾತಾಡ್ ಮಾತಾಡು ಮಲ್ಲಿಗೆ : ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರಕ್ಕೆ ನಾಲ್ಕನೇ ವಾರ. ಮಣ್ಣಿನ ಮಗನ ಪಾತ್ರದಲ್ಲಿ ವಿಷ್ಣು, ಹಳ್ಳಿ ಹೆಂಗಸಿನ ಪಾತ್ರದಲ್ಲಿ ಸುಹಾಸಿನಿ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜಾಗತೀಕರಣದ ವಿರುದ್ಧ ಈ ಚಿತ್ರದ ಮುಖಾಂತರ ನಾಗತಿ ಕಪ್ಪು ಬಾವುಟ ಹಾರಿಸಿದ್ದಾರೆ.

    3. ಅನಾಥರು : ತಮಿಳಿನ 'ಪಿತಾಮಗನ್'ಚಿತ್ರ ಕನ್ನಡದಲ್ಲಿ 'ಅನಾಥರು' ಆಗಿ ಹೊರಬಂದಿದೆ. ನಿರ್ದೇಶಕ ಸಾಧು ಕೋಕಿಲಾ ಶ್ರಮ ವ್ಯರ್ಥವಾಗಿಲ್ಲ. ಉಪೇಂದ್ರ ಅಭಿನಯ ಅವರ ಅಭಿಮಾನಿಗಳಿಗೆ ಬಹುದಿನಗಳ ನಂತರ ಮತ್ತೆ ಇಷ್ಟವಾಗಿದೆ. ದರ್ಶನ್ ಪಾತ್ರವೂ ಮೆಚ್ಚುಗೆಗೆ ಪಾತ್ರವಾಗಿದೆ.

    4. ಮಿಲನ : ಖುಷಿ ಪ್ರಕಾಶ್ ಅವರ ಮಿಲನವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತೆ ಗೆದ್ದಿದ್ದಾರೆ. ಮನೋ ಮೂರ್ತಿ ಸಂಗೀತ ನಿರ್ದೇಶನದಲ್ಲಿನ ಹಾಡುಗಳು ಮಧುರ.. ಸುಮನೋಹರ. 'ಕದ್ದುಕದ್ದು ನೋಡೋ ಕಳ್ಳ ಯಾರೋ ಗೀತೆ'ಯಂತೂ ಎಲ್ಲೆಲ್ಲೂ ಕೇಳಿಬರುತ್ತಿದೆ.

    5. ಮುಂಗಾರು ಮಳೆ : ಹೊಸ ಚಿತ್ರಗಳ ಮಧ್ಯೆಯೂ 'ಮಳೆ'ಸುರಿಯುತ್ತಿದೆ. ಚಿತ್ರ ಒಂದು ವರ್ಷ ಪೂರೈಸುವ ಸಾಧ್ಯತೆಗಳಿವೆ.

    Thursday, May 19, 2011, 13:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X