For Quick Alerts
  ALLOW NOTIFICATIONS  
  For Daily Alerts

  ಡಿಕೆಶಿಯ ಹೆಸರಿಡದ ಚಿತ್ರಕ್ಕೆ ರಮ್ಯಾ ನಾಯಕಿ

  |

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ತಮ್ಮ ಒಂದು ಕಾಲನ್ನು ರಾಜಕೀಯಕ್ಕೆ ಇಟ್ಟಾಗಿದೆ. ಇನ್ನಂದು ಕಾಲು ಮಾತ್ರ ಚಿತ್ರರಂಗದಲ್ಲಿದೆ. ಆದರೆ ಅದೊಂದೇ ಕಾಲು ಸಾಕಷ್ಟು ಗಟ್ಟಿಯಾಗುವ ಲಕ್ಷಣಗಳು ಈ ವರ್ಷದಲ್ಲೂ ಕಾಣುತ್ತಿವೆ. ಕಾರಂ ರಮ್ಯಾ ನಟನೆಯ ಸಿದ್ಲಿಂಗು ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

  ಹೊಸ ವಿಷಯವೇನೆಂದರೆ ಸದ್ಯದಲ್ಲಿಯೇ ಪ್ರಾರಂಭವಾಗಲಿರುವ ಕಾಂಗ್ರೆಸ್ ಹಿರಿಯ ನಾಯಕ ಡಿ ಕಡ ಶಿವಕುಮಾರ್ ನಿರ್ಮಾಣದ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೀರೋ, ನಿರ್ದೆಶಕ ಹಾಗೂ ಉಳಿದ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಸದ್ಯಕ್ಕೆ ರಮ್ಯಾ ಅಭಿನಯದ 'ಲಕ್ಕಿ' ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.

  ಉಳಿದಂತೆ ರಮ್ಯಾ ನಟಿಸಲಿರುವ ಚಿತ್ರಗಳ ಲಿಸ್ಟ್ ದೊಡ್ಡದಿದೆ. ತೆಲುಗಿನ ಅರುಂಧತಿ ಚಿತ್ರದ ನಿರ್ದೆಶಕ ಕೋಡಿ ರಾಮಕೃಷ್ಣ ಕನ್ನಡದಲ್ಲೊಂದು ಚಿತ್ರ ನಿರ್ದೆಶಿಸುತ್ತಿದ್ದಾರೆ. ಅದಕ್ಕೂ ರಮ್ಯಾ ನಾಯಕಿ. ಕಠಾರಿ ವೀರ ಸುರಸುಂದರಾಂಗಿ ಚಿತ್ರಕ್ಕೆ ರಮ್ಯಾ ಸೂಪರ್ ಸ್ಟಾರ್ ಉಪೇಂದ್ರರಿಗೆ ನಾಯಕಿ. ಇಷ್ಟೇ ಅಲ್ಲ, ಕರಾರುಪತ್ರಕ್ಕೆ ಸಹಿ ಹಾಕದ ಚಿತ್ರಗಳು ಇನ್ನೂ ಕೆಲವಿ ಇವೆ. ಒಟ್ಟಿನಲ್ಲಿ ರಮ್ಯಾ ಅಭಿಮಾನಿಗಳಿಗೆ ಈ ವರ್ಷ ಸಾಕಷ್ಟು ರಮ್ಯಾ ಚಿತ್ರಗಳಿವೆ. (ಒನ್ ಇಂಡಿಯಾ ಕನ್ನಡ)

  English summary
  Actress Ramya acts in the movie of Congress Senior Leader D K Shivakumar. Hero, director and other informations has yet to come. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X