twitter
    For Quick Alerts
    ALLOW NOTIFICATIONS  
    For Daily Alerts

    ಬಸಂತಕುಮಾರ್ ಪಾಟೀಲ್ ಮೇಲೆ ಎಗರಿಬಿದ್ದ ದ್ವಾರಕೀಶ್

    By * ಚಿತ್ರಗುಪ್ತ
    |

    Dwarakish
    ಬೆಳಗಾವಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಸುಖಾ ಸುಮ್ಮನೇ ಐದು ದಿನ ರಜಾ ಘೋಷಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರ ಧೋರಣೆಯನ್ನು ನಟ, ನಿರ್ಮಾಪಕ ದ್ವಾರಕೀಶ್ ಖಂಡಿಸಿದ್ದಾರೆ.ಈ ಬಗ್ಗೆ ದ್ವಾರಕೀಶ್ ಅವರು ಹೇಳುವುದನ್ನು ಅವರ ಬಾಯಾರೇ ಕೇಳಿ...

    ಬಸಂತ್ ಕುಮಾರ್ ಪಾಟೀಲರಿಗೆ ಮಾತೆತ್ತಿದರೆ ರಜೆ ಘೋಷಿಸುವುದೊಂದೇ ಗೊತ್ತಿರೋದು. ಅದನ್ನ್ ಬಿಟ್ರೆ ಇಲ್ಲಸಲ್ಲದವರ ಮೇಲೆ ಆರೋಪ ಮಾಡೋದು. ಅದನ್ನ್ ಬಿಟ್ರೆ ಛೇಂಬರ್‌ನಲ್ಲಿ ಕೂತು ರಾಜಕೀಯ ಮಾಡೋದು. ಅಲ್ಲಾ... ಐದ್ ದಿನಾ ರಜಾ ಕೊಟ್ರೆ ನಮ್ ಸಿನ್ಮಾ ಕಾರ್ಮಿಕರ ಕಥೆ ಏನ್ ಆಗ್ಬೇಡ? ಸಿನ್ಮಾ ಉದ್ಯಮದಲ್ಲಿ ಬರೋ ದಿನಗೂಲಿ ನಂಬ್ಕೊಂಡಿರೋ ಜನ ಅದೆಷ್ಟೋ ಇದಾರೆ. ಅವ್ರನ್ನೆಲ್ಲಾ ಒಂದ್ ಸಾರಿ ಬಂದ್ ನೋಡಿದ್ರೆ ನಿಜ್ವಾದ್ ಕಷ್ಟ ಏನು ಅಂತ ಗೊತ್ತಾಗುತ್ತೆ.

    ನಾವೆಲ್ಲ ಇಷ್ಟೊಂದ್ ವರ್ಷದಿಂದ ಇದೀವಿ. ನಮ್ಮಲ್ಲಿ ಯಾರೊಬ್ಬರ ಅಭಿಪ್ರಾಯಾನೂ ಕೇಳ್ದೇ ಏಕಾಏಕಿ ಐದು ದಿನ ರಜಾ ಘೋಷಿಸೋಕೆ ಯಾರ್ರೀ ಪರ್ಮಿಷನ್ ಕೊಟ್ಟಿದ್ದು?!ಹೀಗೆ ಪಾಟೀಲರ ಮೇಲೆ ದ್ವಾರಕೀಶ್ ಹರಿಹಾಯುತ್ತಿದ್ದಾರೆ. ಅವರು ಹಾಗೆ ಪಾಟೀಲ್ ಮೇಲೆ ಕೂಗಾಡೋಕೆ ಸುದೀಪ್ ವಿರುದ್ಧ ಪಾಟೀಲರು ಹರಿಹಾಯ್ತಾ ಇರೋದೂ ಕಾರಣ ಇರಬಹುದಾ?! ಗೊತ್ತಿಲ್ಲ!!!

    English summary
    Popular Kannada producer and comedy actor Dwarakish strongly reacts on Karnataka Film Chamber of Commerce (KFCC) chief Basanth Kumar Patil announcement. Patil has declares a five days holiday for Kannada films on account of the Vishwa kannada Sammelana 2011, Belgaum. In a statement Dwarakish questioned Patil, Who has given permission to announce holiday for film industry?
    Wednesday, February 23, 2011, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X